ವಿಶ್ವಕಪ್: ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾಗೆ ರೋಚಕ ಗೆಲುವು

Update: 2023-10-27 17:25 GMT

Photo:X/@cricketworldcup

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ 1 ವಿಕೆಟ್ ಗಳಿಂದ ರೋಚಕ ಗೆಲುವು ಸಾಧಿಸಿದೆ.

ಐಡಮ್ ಮಾರ್ಕ್ರಮ್ ಆಕರ್ಷಕ 91 ರನ್ ನೆರವಿನಂದ ಹರಿಣಗಳು, ಪಾಕಿಸ್ತಾನ ತಂಡವನ್ನು ಸೋಲಿಸುವುದರೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿಕೆಯಾದರೆ. ಸತತ ನಾಲ್ಕು ಪಂದ್ಯವನ್ನು ಸೋತ ಪಾಕ್ ಬಹುತೇಕ ಸೆಮೀಸ್ ಹಾದಿಯನ್ನು ದುರ್ಘಮವಾಗಿಸಿದೆ.

ಪಾಕಿಸ್ತಾನ ನೀಡಿದ 271 ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 3.3 ಓವರ್ ಗಳಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿ ಆಘಾತ ಅನುಭವಿಸಿತು. ಟೂರ್ನಿಯಲ್ಲಿ ಮೂರು ಶತಕ ಬಾರಿಸಿ ಮಿಂಚಿದ್ದ ಕ್ವಿಂಟನ್ ಡಿಕಾಕ್ (24) ತಂಡಕ್ಕೆಭರ್ಜರಿ ಆರಂಭ ನೀಡುವ ಉದ್ದೇಶ ದಿಂದ ಸ್ಟೋಟಕವಾಗಿ ಬ್ಯಾಟ್ ಬೀಸಿದ ಪರಿಣಾಮ ಶಾಹೀನ್ ಅಫ್ರಿದಿ ಬೌಲಿಂಗ್ ನಲ್ಲಿ ಔಟ್ ಆದರು. ನಾಯಕ ತೆಂಬ ಬವುಮ 28 ರನ್ ಗೆ ವಾಸಿಮ್ ಗೆ ವಿಕೆಟ್ ಒಪ್ಪಿಸುವುದರ ಮೂಲಕ ಟೂರ್ನಿಯಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ವಾನ್ ಡರ್ ಡುಸ್ಸನ್ 21 ರನ್ ಬಾರಿಸಿ ಉಸಾಮ ಮಿರ್ ಗೆ ವಿಕೆಟ್ ಒಪ್ಪಿಸಿದರೆ ಅನುಭವಿ ಬ್ಯಾಟರ್ ಹೆನ್ರಿರಿಚ್ ಕ್ಲಾಸನ್ ಕೇವಲ 12 ರನ್ ಗೆ ಮುಹಮ್ಮದ್ ವಾಸಿಮ್ ಗೆ ವಿಕೆಟ್ ನೀಡಿದರು 21.4 ಓವರ್ ಗಳಲ್ಲಿ 136 ರನ್ ಗೆ ಪ್ರಮಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಪಾಕ್ ಸಂಘಟಿತ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಐಡಮ್ ಮಾರ್ಕ್ರಮ್ 91 ರನ್ ಬಾರಿಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ಯಲು ಪ್ರಯತ್ನಸಿದರು. ಆದರೆ ಉಸಾಮ ಮಿರ್ ಬೌಲಿಂಗ್ ನಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ಬಾಬರ್ ಅಝಮ್ ಗೆ ಕ್ಯಾಚಿತ್ತು ಔಟ್ ಆದರು. ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಪಾಕಿಸ್ತಾನ ಬೌಲರ್ ಗಳು ಪಂದ್ಯವನ್ನು ಕಡೇ ಹಂತದದ ವರೆಗೂ ಕೊಂಡೊಯ್ದರು. ಆದರೆ ಅಂತಿಮವಾಗಿ ಪಾಕಿಸ್ತಾನ ಗೆಲ್ಲುವಲ್ಲಿ ವಿಫಲವಾಯಿತು. ದಕ್ಷಿಣ ಆಫ್ರಿಕಾ ಪರ ಡೆವಿಡ್ ಮಿಲ್ಲರ್(29) ಜೆರಾಲ್ಡ್ (10) ಮಾರ್ಕೊ ಜಾನ್ಸನ್ (20 ) ಮಹಾರಾಜ್ (7) ಲುಂಗಿ ಎನ್ ಗಿಡಿ (4) ಶಂಝಿ (4) ರನ್ ಬಾರಿಸಿದ್ದರು.

ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ 3 ವಿಕೆಟ್ ಪಡೆದರೆ, ಮುಹಮ್ಮದ್ ವಾಸಿಮ್, ಉಸಾಮ ಮಿರ್ ಹಾಗೂ ಹಾರಿಸ್ ರವೂಫ್ ತಲಾ 2 ವಿಕೆಟ್ ವಿಕೆಟ್ ಕಬಳಿಸಿದರು.

ಈ ಮೊದಲು ಟಾಸ್ ಗೆದ್ದ ಪಾಕಿಸ್ತಾನ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಾಕ್ ತಂಡ ಈ ಪಂದ್ಯದಲ್ಲಿಯೂ ತನ್ನ ಆರಂಭಿಕ ಎರಡು ವಿಕೆಟ್ ಗಳನ್ನು 6.3 ಓವರ್ ಒಳಗಡೆಯೇ ಕಳೆದುಕೊಂಡು ಕಳಪೆ ಆರಂಭ ಪಡೆದುಕೊಂಡಿತು.

ಅಬ್ದುಲ್ಲಾ ಶಫೀಕ್ 9 ರನ್ ಗಳಿಸಿದರೆ ಇಮಾಮುಲ್ ಹಕ್ 12 ರನ್ ಬಾರಿಸಿ ಕ್ರಮವಾಗಿ ಮಾರ್ಕೊ ಜಾನ್ಸನ್ ಬೌಲಿಂಗ್ ನಲ್ಲಿ ಔಟ್ ಆದರು. ವಿಕೆಟ್ ಕೀಪರ್ ರಿಝ್ವಾನ್ 31 ರನ್ ಗಳಿಸಿ ಧನಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದರೂ ಜೆರಾಲ್ಡ್ ಬೌಲಿಂಗ್ ನಲ್ಲಿ ಡಿ ಕಾಕ್ ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಇಫ್ತಿಕಾರ್ ಅಹ್ಮದ್ 21 ರನ್ ಗಳಿಸಿ ಶಂಝಿ ಸ್ಪಿನ್ ಮೋಡಿಗೆ ವಿಕೆಟ್ ಕಳೆದುಕೊಂಡರು. ತಂಡದ ಪರ ಆರಂಭದಲ್ಲಿ ಏಕಾಂಗಿ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಬಾಬರ್ ಅಝಮ್ 4 ಬೌಂಡರಿ 1 ಸಿಕ್ಸರ್ ಸಹಿತ 50 ಬಾರಿಸಿ ಯಾರೊಬ್ಬರೂ ಸಾಥ್ ನೀಡದ ಪರಿಣಾಮ ಒತ್ತಡ ಕ್ಕೆ ಸಿಲುಕಿ ತಬ್ರೈಝ್ ಶಂಸಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.

ಬಳಿಕ ತಂಡಕ್ಕೆ ಕೊಂಚ ಚೇತರಿಕೆ ನೀಡಿದ ಸೌದ್ ಶಕೀಲ್ ಹಾಗೂ ಶಾದಬ್ ಖಾನ್ ಜೋಡಿ 84 ರನ್ ಜೊತೆಯಾಟ ನಡೆಸಿ ತಂಡದ ಮೊತ್ತ ಹೆಚ್ಚಿಸಿದರು. ಈ ಜೊತೆಯಾಟದಲ್ಲಿ ಶಾದಬ್ ಖಾನ್ 43 ರನ್ ಗಳಿಸಿ ಔಟ್ ಆದರೆ, ಸೌದ್ ಶಕೀಲ್ 7 ಬೌಂಡರಿ ಸಹಿತ 52 ರನ್ ಬಾರಿಸಿ ತಬ್ರೈಝ್ ಶಂಸಿ ಸ್ಪಿನ್ ಬಲೆ ಗೆ ಬಿದ್ದರು. ಮುಹಮ್ಮದ್ ನವಾಝ್ 24, ಶಾಹೀನ್ ಅಫ್ರಿದಿ 2 , ಮುಹಮ್ಮದ್ ವಾಸಿಮ್ 7 ರನ್ ಬಾರಿಸಿದ್ದರು.

ದಕ್ಷಿಣ ಆಫ್ರಿಕಾ ಪರ ತಬ್ರೈಝ್ ಶಂಸಿ 4 ಪಡೆದುಕೊಂಡರೆ ವಿಕೆಟ್ ಮಾರ್ಕೊ ಜಾನ್ಸನ್ 3, ಜೆರಾಲ್ಡ್ ಕೊಯಿಟ್ಝಿ 2, ಲಿಂಗಿ ಎನ್ ಗಿಡಿ 1 ವಿಕೆಟ್ ಕಬಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News