ಪಾಕಿಸ್ತಾನ ಆಟಗಾರರ ವಿರುದ್ಧ ಪ್ರೇಕ್ಷಕರ ಅನುಚಿತ ವರ್ತನೆ: ಐಸಿಸಿಗೆ ದೂರು ನೀಡಿದ ಪಿಸಿಬಿ

Update: 2023-10-18 21:40 IST
ಪಾಕಿಸ್ತಾನ ಆಟಗಾರರ ವಿರುದ್ಧ ಪ್ರೇಕ್ಷಕರ ಅನುಚಿತ ವರ್ತನೆ: ಐಸಿಸಿಗೆ ದೂರು ನೀಡಿದ ಪಿಸಿಬಿ

Photo: Twitter/@TheRealPCB

  • whatsapp icon

ಲಾಹೋರ್ : ಅಹ್ಮದಾಬಾದ್‌ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಸಂದರ್ಭದಲ್ಲಿ ಕೆಲವು ಅಹಿತಕರ ಪ್ರಕರಣಗಳು ವರದಿಯಾಗಿವೆ. ಪಾಕ್ ಆಟಗಾರರ ವಿರುದ್ಧ ಭಾರತ ತಂಡದ ಕ್ರಿಕೆಟ್ ಅಭಿಮಾನಿಗಳ ನಡವಳಿಕೆಯ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮುಖ್ಯಸ್ಥ ಝಕಾ ಅಶ್ರಫ್ ಅವರು ಐಸಿಸಿಗೆ ಪ್ರತಿಭಟನೆ ಸಲ್ಲಿಸಿದ್ದಾರೆ.

ಪ್ರೇಕ್ಷಕರ ಅನುಚಿತ ವರ್ತನೆ ಕುರಿತು ಪಿಸಿಬಿ ಮಂಗಳವಾರ ಅಧಿಕೃತವಾಗಿ ದೂರು ಸಲ್ಲಿಸಿದೆ.

ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಅಶ್ರಫ್ ಅವರೂ ವೀಕ್ಷಿಸಿದ್ದರು. ಅಶ್ರಫ್ ಅವರನ್ನು ಬಿಸಿಸಿಐನ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಪಂದ್ಯದ ವೇಳೆ ಕೆಲವು ಪ್ರೇಕ್ಷಕರು ಪಾಕ್ ಆಟಗಾರರ ವಿರುದ್ಧ ಕೂಗಿದ ಘೋಷಣೆ, ಮತ್ತಿತರ ವಿಷಯಗಳಿಂದ ಅಶ್ರಫ್ ಅವರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News