ಹಾರ್ದಿಕ್ ಪಾಂಡ್ಯಾ ಹಿಂದಿಕ್ಕಿ ಟಿ20 ನಾಯಕನಾಗಿ ಆಯ್ಕೆಯಾದ ಸೂರ್ಯ ಕುಮಾರ್ ಯಾದವ್
Update: 2024-07-18 21:32 IST

ಸೂರ್ಯ ಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯಾ | PTI
ಮುಂಬೈ : ಅಮೆರಿಕ-ವೆಸ್ಟ್‌ಇಂಡೀಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಪ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಿ 33ರ ವಯಸ್ಸಿನ ಸೂರ್ಯಕುಮಾರ್ ಯಾದವ್ ಭಾರತದ ಟಿ20 ನಾಯಕತ್ವಕ್ಕೆ ಆಯ್ಕೆಯಾಗಿದ್ದಾರೆ.
ಸ್ಟಾರ್ ಆಲ್‌ರೌಂಡರ್ ಪಾಂಡ್ಯ ಅವರು ಮುಂಬೈನ ಬ್ಯಾಟರ್ ಸೂರ್ಯಗಿಂತ ಮೂರು ವರ್ಷ ಕಿರಿಯವನಾಗಿದ್ದಾರೆ. ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ ಅಗರ್ಕರ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಸೂರ್ಯಗೆ ಹೆಚ್ಚು ಆದ್ಯತೆ ನೀಡಿದ್ದಾರೆ ಎಂದು ವರದಿಯಾಗಿದೆ.