ಟೇಬಲ್ ಟೆನಿಸ್: ಭಾವನಾಬೆನ್ ಪಟೇಲ್‌ಗೆ ಸೋಲು
Update: 2024-09-04 14:34 GMT
ಪ್ಯಾರಿಸ್: ಭಾರತದ ಪ್ಯಾರಾಟೇಬಲ್ ಟೆನಿಸ್ ಪಟು ಭಾವನಾಬೆನ್ ಪಟೇಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬುಧವಾರ ಮಹಿಳೆಯರ ಸಿಂಗಲ್ಸ್ ಕ್ಲಾಸ್4ನಲ್ಲಿ ಸೆಮಿ ಫೈನಲ್ ತಲುಪುವಲ್ಲಿ ವಿಫಲರಾದರು.
ಚೀನಾದ ಝೌ ಯಿಂಗ್ ವಿರುದ್ದ ನಡೆದ ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಟೋಕಿಯೊ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಭಾವನಾಬೆನ್ 12-14, 9-11, 11-8, 6-11 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಸೋಲಿನೊಂದಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭಾವನಾಬೆನ್ ಕನಸುಭಗ್ನವಾಯಿತು.