ಯುಎಸ್ ಓಪನ್ | ಮಿಶ್ರ ಡಬಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ ಜೋಡಿ

Update: 2024-09-01 15:14 GMT

ಅಲ್ಡಿಲಾ ಸುಟ್ಜಿಯಾಡಿ , ರೋಹನ್ ಬೋಪಣ್ಣ | PC : X \ @selow_mas

ಪ್ಯಾರಿಸ್ : ಪ್ರತಿಷ್ಠಿತ ಅಮೆರಿಕ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಇಂಡೋನೇಶ್ಯದ ಅಲ್ಡಿಲಾ ಸುಟ್ಜಿಯಾಡಿ ಜೋಡಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ.

8ನೇ ಶ್ರೇಯಾಂಕದ ಜೋಡಿ ಒಂದು ಗಂಟೆ, 13 ನಿಮಿಷಗಳ ಕಾಲ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಜೋಡಿ ಜಾನ್ ಪಿಯರ್ಸ್ ಹಾಗೂ ಝೆಕ್ ಗಣರಾಜ್ಯದ ಕಟೆರಿನಾ ಸಿನಿಯಾಕೋವಾರನ್ನು 0-6, 7-6(5), 10-7 ಸೆಟ್ ಗಳ ಅಂತರದಿಂದ ಮಣಿಸಿದರು.

ಕ್ವಾರ್ಟರ್ ಫೈನಲ್ ನಲ್ಲಿ ಬೋಪಣ್ಣ ಜೋಡಿ 4ನೇ ಶ್ರೇಯಾಂಕದ ಬಲಿಷ್ಠ ಜೋಡಿ ಮ್ಯಾಥ್ಯೂ ಎಬ್ಡೆನ್ ಹಾಗೂ ಬಾರ್ಬೊರಾ ಕ್ರೆಜ್ಸಿಕೋವಾರ ಸವಾಲನ್ನು ಎದುರಿಸಲಿದೆ.

ಪುರುಷರ ಡಬಲ್ಸ್ ವಿಭಾಗದಲ್ಲಿ ಬೋಪಣ್ಣ ಹಾಗೂ ಎಬ್ಡೆನ್ ಜೋಡಿ ಮೂರನೇ ಹಂತಕ್ಕೆ ತಲುಪಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News