ಅರ್ಧ ಶತಕದಲ್ಲಿ ಸಚಿನ್ ದಾಖಲೆಯನ್ನು ಸರಿಗಟ್ಟಿದ ಕೊಹ್ಲಿ

Update: 2023-11-13 17:48 GMT

Photo : cricketworldcup.com

ಬೆಂಗಳೂರು: ಬೆಂಗಳೂರಿನಲ್ಲಿ ರವಿವಾರ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ ತನ್ನ 50ನೇ ಏಕದಿನ ಶತಕವನ್ನು ಬಾರಿಸುವಲ್ಲಿ ವಿಫಲರಾದರು. ಆದರೆ ಅರ್ಧ ಶತಕವೊಂದನ್ನು ಬಾರಿಸುವ ಮೂಲಕ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾದರು.

ಇದು ಈ ವಿಶ್ವಕಪ್ನಲ್ಲಿ ಕೊಹ್ಲಿಯ ಏಳನೇ ಅರ್ಧ ಶತಕವಾಗಿದೆ. ಇದರೊಂದಿಗೆ ಏಕದಿನ ವಿಶ್ವಕಪ್ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚಿನ ಅರ್ಧ ಶತಕಗಳನ್ನು ಬಾರಿಸಿರುವ ಸಚಿನ್ ಮತ್ತು ಶಾಕಿಬ್ ಅಲ್ ಹಸನ್ರ ದಾಖಲೆಯನ್ನು ಸರಿಗಟ್ಟಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 51 ರನ್ಗಳನ್ನು ಗಳಿಸಿದರು. ಅದರಲ್ಲಿ ಐದು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇದ್ದವು.

ಸಚಿನ್ ತೆಂಡುಲ್ಕರ್ 2003ರ ವಿಶ್ವಕಪ್ ಆವೃತ್ತಿಯಲ್ಲಿ ಏಳು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಶಾಕಿಬ್ ಅಲ್ ಹಸನ್ 2019ರ ಆವೃತ್ತಿಯಲ್ಲಿ ಏಳು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ 7 ಅರ್ಧ ಶತಕಗಳನ್ನು ಬಾರಿಸಿ ಅವರ ದಾಖಲೆಯನ್ನು ಸರಿಗಟ್ಟಿದ್ದು, ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಅವರಿಗೆ ಈ ವಿಶ್ವಕಪ್ನಲ್ಲಿ ಇನ್ನೂ ಎರಡು ಅವಕಾಶಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News