ಮತ್ತೊಮ್ಮೆ RCB ನಾಯಕತ್ವ ವಹಿಸಿಕೊಳ್ಳಲು ವಿರಾಟ್ ಕೊಹ್ಲಿ ಸಜ್ಜು

Update: 2024-11-26 16:09 GMT

ವಿರಾಟ್ ಕೊಹ್ಲಿ | PC : PTI 

ಹೊಸದಿಲ್ಲಿ: ಜಿದ್ದಾದಲ್ಲಿ ಸೋಮವಾರ ಕೊನೆಗೊಂಡಿರುವ 2 ದಿನಗಳ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB)ತಂಡವು 19 ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದು, ಅದರ ರಣತಂತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ.

ನಾಯಕತ್ವದ ಆಯ್ಕೆಯತ್ತ ದೃಷ್ಟಿಹರಿಸದ RCB ತನ್ನ ಬಿಡ್‌ನತ್ತ ಗಮನ ಹರಿಸಿದೆ. ಜೋಶ್ ಹೇಝಲ್‌ವುಡ್, RCB ಖರೀದಿಸಿದ ಅತ್ಯಂತ ದುಬಾರಿ ಆಟಗಾರ(12.50 ಕೋಟಿ ರೂ.)ನಾಗಿದ್ದಾರೆ. ಗುಂಪಿನಲ್ಲಿದ್ದ ಎರಡು ಪ್ರಮುಖ ನಾಯಕತ್ವದ ಆಯ್ಕೆಗಳಾಗಿದ್ದ ರಿಷಭ್ ಪಂತ್ ಹಾಗೂ ಕೆ.ಎಲ್.ರಾಹುಲ್ ಮೇಲೆ ಕ್ರಮವಾಗಿ 11 ಕೋಟಿ ರೂ. ಹಾಗೂ 10.50 ಕೋಟಿ ರೂ. ಬಿಡ್ ಸಲ್ಲಿಸಿರುವುದು RCBಯ ಅಚ್ಚರಿಯ ನಡೆ ಎನಿಸಿಕೊಳ್ಳಲಿಲ್ಲ.

ವಿರಾಟ್ ಕೊಹ್ಲಿ ಅವರು 2025ರ ಆವೃತ್ತಿಗೆ RCB ನಾಯಕನಾಗಿ ಮರಳಲು ಸಜ್ಜಾಗಿದ್ದಾರೆ. 22 ಸದಸ್ಯರ(19 ಆಟಗಾರರ ಖರೀದಿ, ಮೂವರು ರಿಟೆನ್ಶನ್) ತಂಡದ ಆಯ್ಕೆಯು ಆ ದಿಕ್ಕಿನತ್ತ ಬೆಟ್ಟು ಮಾಡುತ್ತಿದೆ. ಪಂತ್ ಹಾಗೂ ರಾಹುಲ್ ಮೇಲೆ ಬಿಡ್ಡಿಂಗ್ ಸಲ್ಲಿಸಿದ್ದ RCB ತಂಡವು 26.75 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದ ಶ್ರೇಯಸ್ ಅಯ್ಯರ್‌ರ ಮೇಲೆ ಬಿಡ್ ಸಲ್ಲಿಸಲಿಲ್ಲ.

ಪಂತ್ ಹಾಗೂ ರಾಹುಲ್ ಮೇಲೆ ಆರಂಭದಲ್ಲಿ ಆಕ್ರಮಣಕಾರಿತನ ಪ್ರದರ್ಶಿಸಿದ್ದ RCB ತಂಡವು ಬಿಡ್ ಮೊತ್ತ 10 ಕೋಟಿ ರೂ. ದಾಟಿದ ನಂತರ ಹಿಂದೆ ಸರಿಯಿತು. ಮಾಜಿ ನಾಯಕ ಎಫ್‌ಡು ಪ್ಲೆಸಿಸ್‌ರನ್ನು ಖರೀದಿಸಲು ಮನಸ್ಸು ಮಾಡಲಿಲ್ಲ.

ಈ ಮೊದಲು ವರದಿಯಾದಂತೆ ಕೊಹ್ಲಿ ಅವರು ನಾಯಕತ್ವದ ಪಾತ್ರವಹಿಸುವ ತನ್ನ ಉದ್ದೇಶದ ಕುರಿತು ಈಗಾಗಲೇ ಟೀಮ್ ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತುಕತೆ ನಡೆಸಿದ್ದಾರೆ. 2013ರಿಂದ 2021ರ ತನಕ RCB ತಂಡದ ನಾಯಕತ್ವವಹಿಸಿದ್ದ ಕೊಹ್ಲಿ ತಂಡವನ್ನು 4 ಬಾರಿ ಪ್ಲೇ ಆಫ್ ಸುತ್ತಿಗೆ ತಲುಪಿಸಿದ್ದರು. 2016ರಲ್ಲಿ ಪ್ರಶಸ್ತಿ ಗೆಲ್ಲುವ ಸನಿಹ ತಲುಪಿಸಿದ್ದರು. ಆಗ RCB ಫೈನಲ್‌ನಲ್ಲಿ ಸನ್‌ರೈಸರ್ಸ್ ತಂಡದ ವಿರುದ್ಧ ಸೋತಿತ್ತು.

ಎರಡು ದಿನಗಳ ಹರಾಜು ಕಾರ್ಯಕ್ರಮದಲ್ಲಿ RCB ಒಟ್ಟು 22 ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಆಸ್ಟ್ರೇಲಿಯದ ಜೋಶ್ ಹೇಝಲ್‌ವುಡ್ ಹಾಗೂ ಟಿಮ್ ಡೇವಿಡ್ ಅವರು RCB ಖರೀದಿಸಿರುವ ಪ್ರಮುಖ ಆಟಗಾರರಾಗಿದ್ದಾರೆ.

►ಐಪಿಎಲ್-2025ಕ್ಕೆ RCBಯ ಸಂಪೂರ್ಣ ತಂಡ

ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್(8.75 ಕೋಟಿ ರೂ.), ಫಿಲ್ ಸಾಲ್ಟ್(11.50 ಕೋಟಿ ರೂ.), ಜಿತೇಶ್ ಶರ್ಮಾ(11 ಕೋಟಿ ರೂ.), ಜೋಶ್ ಹೇಝಲ್‌ವುಡ್(12.50 ಕೋಟಿ ರೂ.), ರಸಿಖ್ ದರ್(6 ಕೋಟಿ ರೂ.), ಸುಯಶ್ ಶರ್ಮಾ(2.60 ಕೋಟಿ ರೂ.), ಕೃನಾಲ್ ಪಾಂಡ್ಯ(5.75 ಕೋಟಿ ರೂ.), ಭುವನೇಶ್ವರ ಕುಮಾರ್(10.75 ಕೋಟಿ ರೂ.), ಸ್ವಪ್ನಿಲ್ ಸಿಂಗ್(50 ಲಕ್ಷ ರೂ.), ಟಿಮ್ ಡೇವಿಡ್(3 ಕೋಟಿ ರೂ.), ರೊಮಾರಿಯೊ ಶೆಫರ್ಡ್(1.50 ಕೋಟಿ ರೂ.), ನುವಾನ್ ತುಷಾರ(1.60 ಕೋಟಿ ರೂ.), ಮನೋಜ್ ಭಂಡಾಗೆ(30 ಲಕ್ಷ ರೂ.), ಜೇಕಬ್ ಬೆಥೆಲ್(2.60 ಕೋಟಿ ರೂ.), ದೇವದತ್ತ ಪಡಿಕ್ಕಲ್(2 ಕೋಟಿ ರೂ.), ಸ್ವಸ್ತಿಕ್ ಚಿಕಾರಾ(30 ಲಕ್ಷ ರೂ.), ಲುಂಗಿ ಗಿಡಿ(1 ಕೋಟಿ ರೂ.), ಅಭಿನಂದನ್ ಸಿಂಗ್(30 ಲಕ್ಷ ರೂ.), ಮೋಹಿತ್ ರಾಥಿ(30 ಲಕ್ಷ ರೂ.)

► ಐಪಿಎಲ್ 2025ಕ್ಕೆ RCB ತಂಡ ಸಂಯೋಜನೆ

ಬ್ಯಾಟರ್‌ಗಳು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ತ ಪಡಿಕ್ಕಲ್, ಸ್ವಸ್ತಿಕ್ ಚಿಕಾರ.

ವಿಕೆಟ್‌ ಕೀಪರ್‌ಗಳು: ಫಿಲ್ ಸಾಲ್ಟ್, ಜಿತೇಶ್ ಶರ್ಮಾ.

ಆಲ್‌ರೌಂಡರ್‌ಗಳು: ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಮನೋಜ್ ಭಂಡಾಗೆ, ಜೇಕಬ್ ಬೆಥೆಲ್.

ವೇಗದ ಬೌಲರ್‌ಗಳು: ಜೋಶ್ ಹೇಝಲ್‌ವುಡ್, ರಸಿಖ್ ದರ್, ಭುವನೇಶ್ವರ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ಲುಂಗಿ ಗಿಡಿ, ಅಭಿನಂದನ್ ಸಿಂಗ್.

ಸ್ಪಿನ್ನರ್‌ಗಳು: ಸುಯಶ್ ಶರ್ಮಾ, ಮೋಹಿತ್ ರಾಥಿ

ತಂಡದ ಸಾಮರ್ಥ್ಯ: 22 ಆಟಗಾರರು

ವಿದೇಶೀ ಆಟಗಾರರು: 8

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News