ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಭೇಟಿಯಾದ ವಿರಾಟ್ ಕೊಹ್ಲಿ

Update: 2023-10-24 18:31 GMT

Photo : twitter/SukhuSukhvinder

ಶಿಮ್ಲಾ : ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಧರ್ಮಶಾಲಾದಲ್ಲಿ ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಭೇಟಿಯಾದರು. ಈ ಭೇಟಿಯ ಸಂದರ್ಭ ಕ್ರಿಕೆಟ್ ಕುರಿತು ಚರ್ಚಿಸಿದರು. ನ್ಯೂಝಿಲ್ಯಾಂಡ್ ವಿರುದ್ಧ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದ ಕೊಹ್ಲಿಗೆ ಸಿಎಂ ಸುಖು ಅಭಿನಂದನೆ ಸಲ್ಲಿಸಿದರು. ಈ ಬಾರಿ ಭಾರತವು ವಿಶ್ವಕಪ್ ಗೆಲ್ಲುವ ಪ್ರಬಲ ತಂಡವಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ವೇಳೆ ಹಿಮಾಚಲಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ಸಹ ಉಸ್ತುವಾರಿ ತೇಜೇಂದ್ರ ಬಿಟ್ಟು, ಮುಖ್ಯಮಂತ್ರಿಯ ರಾಜಕೀಯ ಸಲಹೆಗಾರ ಸುನೀಲ್ ಶರ್ಮಾ ಹಾಗು ಶಾಸಕ ಸುಧೀರ್ ಶರ್ಮ ಅವರಿದ್ದರು.

104 ಎಸೆತಗಳಲ್ಲಿ 95 ರನ್ ಗಳಿಸಿದ್ದ ಕೊಹ್ಲಿ ಕೇವಲ 5 ರನ್ನಿಂದ 49ನೇ ಶತಕದಿಂದ ವಂಚಿತರಾದರು. 31 ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಗಳಲ್ಲಿ ವಿರಾಟ್ 31 ಇನಿಂಗ್ಸ್ ಗಳಲ್ಲಿ 3 ಶತಕ ಹಾಗೂ 9 ಅರ್ಧಶತಕಗಳ ಸಹಿತ 1,384 ರನ್ ಗಳಿಸಿದ್ದು ಟೂರ್ನಿಯ ಇತಿಹಾಸದಲ್ಲಿ ನಾಲ್ಕನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News