ಮಹಿಳೆಯರ ಟಿ-20 ವಿಶ್ವಕಪ್ ಟ್ರೋಫಿ ಪರ್ಯಟನೆ: ನಾಳೆ (ಸೆ .6) ಬೆಂಗಳೂರಿಗೆ ಆಗಮನ
ಹೊಸದಿಲ್ಲಿ: ಮಹಿಳೆಯರ ಟಿ20 ವಿಶ್ವಕಪ್-2024 ಟ್ರೋಫಿಯು ದುಬೈನಲ್ಲಿ ಪ್ರೇಕ್ಷಕರನ್ನು ಸಾಕಷ್ಟು ಸೆಳೆದಿದ್ದು, ತನ್ನ ಪರ್ಯಟನೆ ಆರಂಭಿಸಿರುವ ಟ್ರೋಫಿಯು ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದೆ ಎಂದು ಪಿಟಿಐ ಶುಕ್ರವಾರ ವರದಿ ಮಾಡಿದೆ.
ಸೆಪ್ಟಂಬರ್ 10ರಂದು ಮುಂಬೈಗೆ ಪ್ರವೇಶಿಸುವ ಮೊದಲು ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯು ನಗರದ ಯುವ ಮಹಿಳಾ ಕ್ರಿಕೆಟ್ ಪ್ರತಿಭೆಗಾಗಿ ಸಮರ್ಪಿಸಿಕೊಂಡಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ (ಐಒಸಿ)ಆಗಮಿಸಲಿದೆ.
ಕ್ರಿಕೆಟ್ ಅಭಿಮಾನಿಗಳಿಗೆ ಸೆಪ್ಟಂಬರ್ 7 ಹಾಗೂ 8ರಂದು ಬೆಂಗಳೂರಿನ ನೆಕ್ಸಸ್ ಮಾಲ್‌ನಲ್ಲಿ ಟ್ರೋಫಿಯನ್ನು ವೀಕ್ಷಿಸುವ ಅವಕಾಶ ಸಿಗಲಿದೆ. ಸೆ.14 ಹಾಗೂ 15ರಂದು ಮುಂಬೈನ ಮಲಾಡ್‌ನಲ್ಲಿರುವ ಇನ್‌ಫಿನಿಟಿ ಮಾಲ್‌ನಲ್ಲಿ ಟ್ರೋಫಿ ಕಾಣಸಿಗಲಿದೆ.
ಭಾರತದ ನಂತರ ಟ್ರೋಫಿಯು ತನ್ನ ಪರ್ಯಟನೆ ಮುಂದುವರಿಸಲಿದ್ದು, ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕೆ ತೆರಳಲಿದೆ. ಅಕ್ಟೋಬರ್ 3ರಂದು ವಿಶ್ವಕಪ್ ಆರಂಭವಾಗಲಿರುವ ಯುಎಇಗೆ ಟ್ರೋಫಿಯು ವಾಪಸಾಗಲಿದೆ.
ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿ ನಿರ್ಮಾಣಗೊಂಡ ಕಾರಣ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಂಗ್ಲಾದೇಶದಿಂದ ಯುಎಇಗೆ ಸ್ಥಳಾಂತರಿಸಲು ಐಸಿಸಿ ನಿರ್ಧರಿಸಿತು.