ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಭಾರತೀಯ ತಂಡಕ್ಕೆ ನೀರಜ್ ಚೋಪ್ರಾ ನೇತೃತ್ವ

Update: 2023-08-08 15:29 GMT

 ನೀರಜ್ ಚೋಪ್ರಾ. | Photo: PTI 

ಹೊಸದಿಲ್ಲಿ: ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾ ಮುಂಬರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಭಾರತ ತಂಡದ ನೇತೃತ್ವ ವಹಿಸಲಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಹಂಗೇರಿಯದ ಬುಡಾಪೆಸ್ಟ್ ನಲ್ಲಿ ಆಗಸ್ಟ್ 19ರಂದು ಆರಂಭವಾಗಲಿದ್ದು, ಭಾರತದ 28 ಅತ್ಲೀಟ್ ಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ.

ಅನಿರೀಕ್ಷಿತ ಹೆಜ್ಜೆಯೊಂದರಲ್ಲಿ ಕ್ರೀಡಾ ಸಚಿವಾಲಯವು ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸುವ ಅತ್ಲೀಟ್ ಗಳ ಪಟ್ಟಿಯನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ಭಾರತದ ಅತ್ಲೆಟಿಕ್ಸ್ ಒಕ್ಕೂಟ(ಎಎಫ್ಐ)ಇಂತಹ ಘೋಷಣೆಗಳನ್ನು ಮಾಡುತ್ತದೆ.

ಆಗಸ್ಟ್ 19ರಿಂದ 27ರ ತನಕ ನಡೆಯುವ ಚಾಂಪಿಯನ್ಶಿಪ್ ಸ್ಪರ್ಧೆಯಿಂದ ಶಾಟ್ ಪುಟ್ನಲ್ಲಿ ಏಶ್ಯನ್ ದಾಖಲೆ ವೀರ ತಜಿಂದರ್ಪಾಲ್ ಸಿಂಗ್ ತೂರ್ ಹಿಂದೆ ಸರಿದಿದ್ದಾರೆ.

ಚೀನಾದಲ್ಲಿ ಸೆ.23ರಿಂದ ಅ.8ರ ತನಕ ನಡೆಯುವ ಏಶ್ಯನ್ ಗೇಮ್ಸ್ ನಲ್ಲಿ ಗಮನ ಹರಿಸಲು ರಾಷ್ಟ್ರೀಯ ದಾಖಲೆ ವೀರ ಹೈಜಂಪರ್ ತೇಜಸ್ವಿನ್ ಶಂಕರ್, 800 ಮೀ. ರನ್ನರ್ ಕೆ.ಎಂ.ಚಂದಾ ಹಾಗೂ 20 ಕಿ.ಮೀ. ರೇಸ್ವಾಕರ್ ಪ್ರಿಯಾಂಕಾ ಗೋಸ್ವಾಮಿ ವಿಶ್ವ ಚಾಂಪಿಯನ್ಶಿಪ್ನಿಂದ ಹೊರಗುಳಿದಿದ್ದಾರೆ.

2022ರಲ್ಲಿ ಅಮೆರಿಕದ ಎವ್ಜಿನ್ನಲ್ಲಿ ನಡೆದ ಹಿಂದಿನ ಆವೃತ್ತಿಯ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಜಯಿಸಿದ್ದ ಹಾಲಿ ಡೈಮಂಡ್ ಲೀಗ್ ಚಾಂಪಿಯನ್ ಚೋಪ್ರಾ ಬುಡಾಪೆಸ್ಟ್ನಲ್ಲಿ ಈ ಬಾರಿ ಚಿನ್ನದ ಪದಕ ಗೆಲ್ಲಲು ಎದುರು ನೋಡುತ್ತಿದ್ದಾರೆ.

ತಂಡ ಮಹಿಳೆಯರು: ಜ್ಯೋತಿ ಯರ್ರಾಜಿ(100 ಮೀ. ಹರ್ಡಲ್ಸ್), ಪಾರುಲ್ ಚೌಧರಿ(3,000 ಮೀ.ಸ್ಟೀಪಲ್ಚೇಸ್), ಶೈಲಿ ಸಿಂಗ್(ಲಾಂಗ್ಜಂಪ್), ಅನ್ನು ರಾಣಿ(ಜಾವೆಲಿನ್ ಎಸೆತ), ಭಾವನಾ ಜಾಟ್(20 ಕಿ.ಮೀ. ರೇಸ್ ವಾಕ್)

ಪುರುಷರು: ಕ್ರಿಶನ್ ಕುಮಾರ್(800 ಮೀ.), ಅಜಯ್ ಕುಮಾರ್ ಸರೋಜ್(1,500 ಮೀ.), ಸಂತೋಷ್ ಕುಮಾರ್ ತಮಿಳರಸನ್(400 ಮೀ. ಹರ್ಡಲ್ಸ್), ಅವಿನಾಶ್ ಸಾಬ್ಲೆ(3,000 ಮೀ.ಸ್ಟೀಪಲ್ ಚೇಸ್), ಸರ್ವೇಶ್ ಅನಿಲ್ ಕುಶಾರೆ(ಹೈಜಂಪ್), ಜೆಸ್ವಿನ್ ಅಲ್ಡ್ರಿನ್(ಲಾಂಗ್ಜಂಪ್), ಎಂ. ಶ್ರೀಶಂಕರ್(ಲಾಂಗ್ ಜಂಪ್), ಪ್ರವೀಣ್ ಚಿತ್ರವೆಲ್(ಟ್ರಿಪಲ್ ಜಂಪ್), ಅಬ್ದುಲ್ಲಾ ಅಬೂಬಕರ್(ಟ್ರಿಪಲ್ ಜಂಪ್), ಎಲ್ಡೋಸ್ ಪೌಲ್(ಟ್ರಿಪಲ್ ಜಂಪ್), ನೀರಜ್ ಚೋಪ್ರಾ(ಜಾವೆಲಿನ್ ಎಸೆತ), ಡಿ.ಪಿ. ಮನು(ಜಾವೆಲಿನ್ ಎಸೆತ), ಕಿಶೋರ್ ಕುಮಾರ್ ಜೆನಾ(ಜಾವೆಲಿನ್ ಎಸೆತ),ಆಕಾಶ್ದೀಪ್ ಸಿಂಗ್(20 ಕಿ.ಮೀ. ರೇಸ್ ವಾಕ್), ವಿಕಾಶ್ ಸಿಂಗ್(20 ಕಿ.ಮೀ. ರೇಸ್ ವಾಕ್), ಪರಮ್ಜೀತ್ ಸಿಂಗ್(20 ಕಿ.ಮೀ. ರೇಸ್ ವಾಕ್), ರಾಮ್ ಬಾಬು(35 ಕಿ.ಮೀ.ರೇಸ್ ವಾಕ್), ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್, ಮುಹಮ್ಮದ್ ಅನಸ್, ರಾಜೇಶ್ ರಮೇಶ್, ಅನಿಲ್ ರಾಜಲಿಂಗಂ, ಮಿಜೊ ಚಾಕೊ ಕುರಿಯನ್(ಪುರುಷರ 4-400 ಮೀ. ರಿಲೇ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News