ನಾಳೆ ಮುಂಬೈನಲ್ಲಿ ಡಬ್ಲ್ಯುಪಿಎಲ್ ಫೈನಲ್ | ಡೆಲ್ಲಿ ಕ್ಯಾಪಿಟಲ್ಸ್ Vs ಮುಂಬೈ ಇಂಡಿಯನ್ಸ್
Photo Credit: Tamal DAS
ಮುಂಬೈ: ಮುಂಬೈಯ ಬ್ರಬೋರ್ನ್ ಸ್ಟೇಡಿಯಮ್ ನಲ್ಲಿ ಶನಿವಾರ ನಡೆಯುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ನ್ಯಾಟ್ ಸೈವರ್-ಬ್ರಂಟ್ ಮತ್ತು ಹೇಲಿ ಮ್ಯಾಥ್ಯೂಸ್ರ ಉತ್ಕೃಷ್ಟ ಪ್ರದರ್ಶನದ ನೆರವಿನಿಂದ ಫೈನಲ್ ಪ್ರವೇಶಿಸಿರುವ ಮುಂಬೈ ಪ್ರಶಸ್ತಿ ಗೆಲ್ಲಬಹುದಾದ ಅಭಿಮಾನಿಗಳ ನೆಚ್ಚಿನ ತಂಡವಾಗಿದೆ. ಸೈವರ್-ಬ್ರಂಟ್ 493 ರನ್ ಗಳು ಮತ್ತು 9 ವಿಕೆಟ್ ಗಳನ್ನು ಗಳಿಸಿದ್ದು, ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮ್ಯಾಥ್ಯೂಸ್ 17 ವಿಕೆಟ್ ಗಳು ಮತ್ತು 304 ರನ್ ಗಳನ್ನು ಗಳಿಸಿದ್ದು, ಬೌಲಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಫೈನಲ್ ನಲ್ಲಿ ಅವರು ನೀಡುವ ನಿರ್ವಹಣೆಯು ತಂಡದ ಸಾಧ್ಯತೆಗಳನ್ನು ನಿರ್ಧರಿಸುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ಗರಿಷ್ಠ ನೆಟ್ ರನ್ ರೇಟ್ನಿಂದಾಗಿ ಫೈನಲ್ ಗೆ ನೇರ ಪ್ರವೇಶವನ್ನು ಪಡೆದಿದೆ. ಮುಂಬೈ ಇಂಡಿಯನ್ಸ್ ನ ಬಲಿಷ್ಠ ಬ್ಯಾಟಿಂಗ್ ಸರದಿಯು ಬ್ಯಾಟಿಂಗ್ ಸ್ನೇಹಿ ಬ್ರಬೋರ್ನ್ ಸ್ಟೇಡಿಯಮ್ ನಲ್ಲಿ ತಂಡಕ್ಕೆ ನೆರವನ್ನು ಒದಗಿಸಲಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ರನ್ನು ಮಹಿಳಾ ಕ್ರಿಕೆಟ್ ನ ಶ್ರೇಷ್ಠ ನಾಯಕಿಯರ ಪೈಕಿ ಒಬ್ಬರೆಂದು ಪರಿಗಣಿಸಲಾಗಿದೆ. ಇಲ್ಲಿ ಟ್ರೋಫಿಯೊಂದನ್ನು ಗೆದ್ದು ತನ್ನ ಸಾಧನೆಗಳ ತುರಾಯಿಗೆ ಇನ್ನೊಂದು ಗರಿಯನ್ನು ಸೇರಿಸಿಕೊಳ್ಳುವ ಹಾಗೂ ಆ ಮೂಲಕ ತಂಡದ ಪ್ರಶಸ್ತಿ ಬರವನ್ನು ನೀಗಿಸಲು ಅವರು ಮುಂದಾಗಿದ್ದಾರೆ.
ಡೆಲ್ಲಿಯು ತನ್ನ ಯಶಸ್ಸಿಗೆ ಬೌಲರ್ಗಳನ್ನೇ ಅತಿಹೆಚ್ಚು ಅವಲಂಬಿಸಿದೆ. ಸ್ಪಿನ್ನರ್ ಜೆಸ್ ಜೊನಾಸನ್ ಮತ್ತು ಭಾರತೀಯ ವೇಗಿ ಶಿಖಾ ಪಾಂಡೆ ತಂಡದ ಪ್ರಧಾನ ಬೌಲರ್ಗಳಾಗಿದ್ದಾರೆ. ಅವರು ಲೀಗ್ ಹಂತಗಳಲ್ಲಿ ತಲಾ 11 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ಮೇಲೆ ಪ್ರಾಬಲ್ಯ ಸಾಧಿಸಿತ್ತು. ಬೆಂಗಳೂರಿನಲ್ಲಿ ನಡೆದ ಆ ಪಂದ್ಯದಲ್ಲಿ ಡೆಲ್ಲಿಯು ತನ್ನ ಎದುರಾಳಿಯನ್ನು 9 ವಿಕೆಟ್ ಗಳ ನಷ್ಟಕ್ಕೆ 123 ರನ್ ಗಳಿಗೆ ನಿಯಂತ್ರಿಸಿತ್ತು ಹಾಗೂ ಅಂತಿಮವಾಗಿ 9 ವಿಕೆಟ್ ಗಳಿಂದ ಗೆದ್ದಿತ್ತು. ಶಿಖಾ ಮತ್ತು ಜೊನಾಸನ್ ಜೊತೆಯಾಗಿ ನಾಲ್ಕು ವಿಕೆಟ್ ಗಳನ್ನು ಉರುಳಿಸಿದ್ದರು.
ಸೈವರ್-ಬ್ರಂಟ್ 9 ಪಂದ್ಯಗಳಲ್ಲಿ ಐದು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅವರು ಬ್ಯಾಟ್ ಮತ್ತು ಚೆಂಡು ಎರಡರಲ್ಲೂ ದೇಣಿಗೆ ನೀಡಿದ್ದಾರೆ. ಅದೇ ವೇಳೆ, ಮ್ಯಾಥ್ಯೂಸ್ರ ಆಫ್-ಬ್ರೇಕ್ ಗಳು ಪರಿಣಾಮಕಾರಿಯಾಗಿದ್ದವು. ಅಮೇಲಿಯಾ ಕೆರ್ ಅವರ ಲೆಗ್ ಬ್ರೇಕ್ ಬೌಲಿಂಗ್ ಬ್ಯಾಟಿಂಗ್ ಪಿಚ್ನಲ್ಲಿ ಉತ್ತಮ ಪರಿಣಾಮ ಬೀರಬಹುದು. ಅಮೇಲಿಯಾ 16 ವಿಕೆಟ್ ಗಳನ್ನು ಪಡೆದಿದ್ದಾರೆ.
►ತಂಡಗಳು
ಮುಂಬೈ ಇಂಡಿಯನ್ಸ್: ಹರ್ಮನ್ಪ್ರೀತ್ ಕೌರ್ (ನಾಯಕಿ), ಅಕ್ಷಿತಾ ಮಹೇಶ್ವರಿ, ಅಮನ್ದೀಪ್ ಕೌರ್, ಅಮನ್ಜೋತ್ ಕೌರ್, ಅಮೇಲಿಯಾ ಕೆರ್, ಕ್ಲೋ ಟ್ರಯೋನ್, ಹೇಲಿ ಮ್ಯಾಥ್ಯೂಸ್, ಜಿಂಟಿಮನಿ ಕಲಿಟ, ಕೀರ್ತನಾ ಬಾಲಕೃಷ್ಣನ್, ನಡೀನ್ ಡಿ ಕ್ಲರ್ಕ್, ನಟಾಲೀ ಸೈವರ್-ಬ್ರಂಟ್, ಪರುಣಿಕಾ ಸಿಸೋಡಿಯ, ಸಜೀವನ್ ಸಜನ್, ಸಂಸ್ಕೃತಿ ಗುಪ್ತಾ, ಜಿ. ಕಮಲಿನಿ (ವಿಕೆಟ್ ಕೀಪರ್), ಯಸ್ತಕಾ ಭಾಟಿಯ (ವಿಕೆಟ್ ಕೀಪರ್), ಸೇಕಾ ಇಶಾಕ್ ಮತ್ತು ಶಬ್ನಿಮ್ ಇಸ್ಮಾಯೀಲ್.
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಜೆಮಿಮಾ ರೊಡ್ರಿಗಸ್, ಶೆಫಾಲಿ ವರ್ಮಾ, ಸ್ನೇಹ್ ದೀಪ್ತಿ, ಆಲಿಸ್ ಕ್ಯಾಪ್ಸಿ, ಅನಾಬೆಲ್ ಸದರ್ಲ್ಯಾಂಡ್, ಅರುಂಧತಿ ರೆಡ್ಡಿ, ಜೆಸ್ ಜೊನಾಸನ್, ಮರಿಝಾನ್ ಕಾಪ್, ಮಿನ್ನು ಮಣಿ, ಎನ್. ಚರಣಿ, ನಿಕಿ
ಪ್ರಸಾದ್, ರಾಧಾ ಯಾದವ್, ಶಿಖಾ ಪಾಂಡೆ, ನಂದಿನಿ ಕಶ್ಯಪ್ (ವಿಕೆಟ್ ಕೀಪರ್), ತಾನಿಯಾ ಭಾಟಿಯ (ವಿಕೆಟ್ ಕೀಪರ್), ಸಾರಾ ಬ್ರೈಸ್ (ವಿಕೆಟ್ ಕೀಪರ್) ಮತ್ತು ಟಿಟಾಸ್ ಸದು.