ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ವೃದ್ಧಿಮಾನ್ ಸಹಾ

Update: 2024-11-04 05:59 GMT

ವೃದ್ಧಿಮಾನ್ ಸಹಾ (Photo: PTI)

ಹೊಸದಿಲ್ಲಿ: ಭಾರತದ ಹಿರಿಯ ವಿಕೆಟ್‌ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ ಅವರು ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ತನ್ನ ಕೊನೆಯ ಋತುವಾಗಿದೆ ಎಂದು ಹೇಳಿದ್ದಾರೆ.

40 ವರ್ಷ ವಯಸ್ಸಿನ ವೃದ್ಧಿಮಾನ್ ಸಹಾ 2010 ರಲ್ಲಿ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದ ನಂತರ 40 ಟೆಸ್ಟ್ ಮತ್ತು 9 ಏಕದಿನ ಪಂದ್ಯದಲ್ಲಿ ಆಡಿದ್ದಾರೆ.

ತಮ್ಮ ನಿವೃತ್ತಿಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು,"ಕ್ರಿಕೆಟ್‌ ಅಂಗಳದಲ್ಲಿನ ನನ್ನ ಪ್ರಯಾಣದ ನಂತರ, ಈ ಋತುವು ನನ್ನ ಕೊನೆಯ ಅವಧಿಯಾಗಿದೆ. ನಾನು ಕೊನೆಯ ಬಾರಿಗೆ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುವ ಗೌರವವನ್ನು ಪಡೆದಿದ್ದೇನೆ. ನಿವೃತ್ತಿಯ ಮೊದಲು ರಣಜಿ ಟ್ರೋಫಿಯಲ್ಲಿ ಮಾತ್ರ ಆಡುತ್ತೇನೆ. ಈ ಋತುವನ್ನು ನೆನಪಿನಲ್ಲಿ ಉಳಿಯುವಂತೆ ಮಾಡೋಣ" ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News