ವುಶು: ಭಾರತಕ್ಕೆ ಕಂಚು ದೃಢಪಡಿಸಿದ ರೋಶಿಬಿನಾ ದೇವಿ

Wushu: Roshibina Devi confirms bronze for India

Update: 2023-09-25 17:11 GMT

Photo: twitter/India_AllSports

ಹಾಂಗ್‌ಝೌ: ಏಶ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 60 ಕೆಜಿ ವುಶು(ಸಾಂಡಾ) ಸ್ಪರ್ಧೆಯಲ್ಲಿ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ನಯೊರೆಮ್  ರೋಶಿಬಿನಾ ದೇವಿ ಭಾರತಕ್ಕೆ ಮತ್ತೊಂದು ಪದಕ  ಖಚಿತಪಡಿಸಿದರು.

ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಎದುರಾಳಿ ಕಝಕಿಸ್ತಾನದ ಐಮನ್ ಕಾರ್ಶಿಗರನ್ನು ಮಣಿಸಿರುವ ರೋಶಿಬಿನಾದೇವಿ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದರು.

ಜಕಾರ್ತದಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯ ಗೇಮ್ಸ್‌ನಲ್ಲಿ ರೋಶಿಬಿನಾ ದೇವಿ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.

ಕಠ್ಮಂಡು-ಪೊಖಾರದಲ್ಲಿ ನಡೆದಿದ್ದ 2019ರ ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಇದೇ ತೂಕ ವಿಭಾಗದಲ್ಲಿ  ರೋಶಿಬಿನಾ ದೇವಿ ಚಿನ್ನದ ಪದಕ ಜಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News