ವಿಶ್ವಕಪ್: 286 ರನ್ ಗೆ ಆಲೌಟ್ ಆದ ಆಸ್ಟ್ರೇಲಿಯ
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ಗೆಲುವಿಗೆ 287 ರನ್ ಗುರಿ ನೀಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧ ಬೌಲಿಂಗ್ ಆಯ್ದುಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಯಲ್ಪಟ್ಟ ಆಸೀಸ್ ಕಳಪೆ ಆರಂಭ ಪಡೆಯಿತು. ಆಂಗ್ಲರ ದಾಳಿಗೆ ಬೆದರಿದ ಆಸೀಸ್ ಪಡೆ 5.4 ಓವರ್ ನಲ್ಲಿ 38 ರನ್ ಗಳಿಸುವಷ್ಟರಲ್ಲಿಯೇ ತನ್ನ ಇಬ್ಬರು ಓಪನರ್ ಗಳನ್ನು ಕಳೆದುಕೊಂಡಿತು. ಟ್ರಾವಿಸ್ ಹೆಡ್ 11 ಹಾಗೂ ಡೆವಿಡ್ ವಾರ್ನರ್ 15 ರನ್ ಗೆ ಕ್ರಮವಾಗಿ ಕ್ರಿಸ್ ವೋಕ್ಸ್ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರು. ವಿಕೆಟ್ ಪತನ ಬಳಿಕ ತಂಡಕ್ಕೆ ಕೊಂಚ ಚೇತರಿಕೆ ನೀಡಿದ ಸ್ಟೀವನ್ ಸ್ಮಿತ್ 44 ರನ್ ಬಾರಿಸಿದರೆ ಮಾರ್ನಸ್ ಲಬುಶೀನ್ 71 ರನ್ ಗಳಿಸಿ ಮಾರ್ಕ್ ವುಡ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಆದರು. ಬಳಿಕ ಬಂದ ಕ್ಯಾಮರಾನ್ ಗ್ರೀನ್ 47 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟರ್ ಗಲೂ ಹೆಚ್ಚು ಸಮಯ ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಮಾರ್ಕಸ್ ಸ್ಟೋನಿಶ್ 35 , ಪ್ಯಾಟ್ ಕಮ್ಮಿನ್ಸ್ 10 ರನ್ ಗಳಿಸಿದರು. ಕಡೇ ಗಳಿಗೆಯಲ್ಲಿ ಬ್ಯಾಟ್ ಬೀಸಿದ ಆಡಂ ಝಾಂಪ 29 ಹಾಗೂ ಸ್ಟಾರ್ಕ್ 10 ಉಪಯುಕ್ತ ಕೊಡುಗೆ ನೀಡಿದರು.
ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್, ಆದಿಲ್ ರಶೀದ್ ಹಾಗೂ ಮಾರ್ಕ್ ವುಡ್ 2 ವಿಕೆಟ್ ಪಡೆದರೆ ಲಿಯಾಮ್ ಹಾಗೂ ವಿಲ್ಲಿ ತಲಾ ಒಂದು ವಿಕೆಟ್ ಪಡೆದರು.