ಮೈಸೂರಿನಲ್ಲಿ 3200 ಉದ್ಯೋಗ ಸೃಷ್ಟಿಯ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆಗೆ ಒಪ್ಪಂದ

Update: 2023-08-24 15:48 GMT

ಬೆಂಗಳೂರು, ಆ.24: ಮೈಸೂರಿನಲ್ಲಿ 3,200 ಉದ್ಯೋಗ ಸೃಷ್ಟಿ ಮಾಡುವ 3,750 ಕೋಟಿ ರೂ. ಹೂಡಿಕೆಯ ಅತ್ಯಾಧುನಿಕ ಸೆಮಿಕಂಡಕ್ಟರ್ ತಯಾರಿಕಾ ಘಟಕದ ಸ್ಥಾಪನೆ ಸಂಬಂಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕೇನ್ಸ್ ಟೆಕ್ನಾಲಜಿ ಸಂಸ್ಥೆಯು ಕರ್ನಾಟಕ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯೊಂದಿಗೆ ಒಡಂಬಡಿಕೆಗೆ (ಎಂಒಯು) ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಹಿ ಹಾಕಿದೆ.

ಕೇನ್ಸ್ ಟೆಕ್ನಾಲಜಿಯು ಮೈಸೂರಿನಲ್ಲಿ ಇಎಸ್‍ಡಿಎಂ ಸೆಮಿಕಾನ್ ಪರಿಸರ ವ್ಯವಸ್ಥೆಯ ಪ್ರಮುಖ ನಿರ್ವಹಣ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಈ ಒಡಂಬಡಿಕೆಯು ಮೈಸೂರು ನಗರವನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸಲು ಸಹಾಯ ಮಾಡುತ್ತದೆ. ಕೇನ್ಸ್ ಸೆಮಿಕಾನ್ ಪ್ರೈವೇಟ್ ಲಿಮಿಟೆಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಸೌಲಭ್ಯದ ಸಂಸ್ಥೆಯಾಗಿದ್ದು, ಬಹು-ಲೇಯರ್ಡ್ ಬೋರ್ಡ್‍ಗಳನ್ನು ಉತ್ಪಾದಿಸಲು ಪ್ರಿಂಟೆಡ್ ಸಕ್ರ್ಯೂಟ್ ಬೋರ್ಡ್ (ಪಿಸಿಬಿ) ತಯಾರಿಕಾ ಘಟಕವಾಗಿ ಕಾರ್ಯ ನಿರ್ವಹಿಸುತ್ತದೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಮಾಹಿತಿ ತಂತ್ರಜಾನ ಇಲಾಖೆಯ ನಿರ್ದೇಶಕ ದರ್ಶನ್, ಕೇನ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಗುಪ್ತಾ ಅವರು ಒಡಂಬಡಿಕೆಗೆ ಸಹಿ ಹಾಕುವ ಸಂದರ್ಭದಲ್ಲಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News