ಹಾಸನ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 39 ಕೊಲೆ: ಎಚ್.ಡಿ. ರೇವಣ್ಣ ಆರೋಪ

Update: 2023-08-11 18:53 GMT

ಹಾಸನ: ಆ, 11: ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ 39 ಕೊಲೆ ನಡೆದಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಡಿಜಿಗೆ ಹತ್ತು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ ಎಂದರೆ ಬಹುಶಃ ಜೆಡಿಎಸ್ ನಾಯಕರ ಕರೆ ಸ್ವೀಕರಿಸ ಬೇಡಿ ಎಂದು ನಿರ್ದೇಶನ ಇದೆಯೇ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಜೆಡಿಎಸ್ ಮುಖಂಡ ಕೃಷ್ಣೇಗೌಡ ಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹಾಸನದಲ್ಲಿ ನಮ್ಮ ಸರಕಾರ ಹೋದ ಮೇಲೆ ನಾನು ತಿಳಿದಂತೆ ಕಳೆದ ಜುಲೈ ನಲ್ಲಿ 39 ಕೊಲೆಗಳಾಗಿವೆ. ಜೊತೆಗೆ ಕೆಲ ಅಹಿತಕರ ಘಟನೆಗಳು ನಡೆದಿದೆ. 2022 ಜುಲೈ ನಿಂದ ಈ ಜುಲೈವರೆಗೂ 19 ಕೊಲೆಗಳು ಹಾಸನ ಜಿಲ್ಲೆಯಲ್ಲಿ ನಡೆದಿವೆ. ಈ ಬಗ್ಗೆ ಎಸ್ಪಿ ಅವರ ಗಮನಕ್ಕೂ ತರಲಾಗಿದ್ದು, ಜೆಡಿಎಸ್ ಕಾರ್ಯಕರ್ತರ ಕೊಲೆಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ' ಎಂದು ದೂರಿದರು. 

ವರ್ಷದ ಹಿಂದೆ ನಮ್ಮ ನಗರಸಭೆ ಸದಸ್ಯನ ಕೊಲೆ ಆಗಿತ್ತು. ಈಗ ನಮ್ಮ ಕೃಷ್ಣೇಗೌಡರ ಕೊಲೆ ಆಗಿದೆ. ಪೊಲೀಸ್ ಇಲಾಖೆಯಲ್ಲಿ ಇಂಟಲಿಜೆನ್ಸ್ ಇರುತ್ತೆ ಅಲ್ವಾ? ಆದರೂ ಯಾಕೆ ಹೀಗೆ ಆಗ್ತಾ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಹಾಸನ ಹತ್ಯೆ ಘಟನೆ ಸಂಬಂದ ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡರು ಡಿಜಿಗೆ ಹತ್ತುಬಾರಿ ಫೋನ್ ಮಾಡಿದ್ರು ಅವರು ಫೋನ್ ಸ್ವೀಕರಿಸಿಲ್ಲ. ಓರ್ವ ಮಾಜಿ ಪ್ರದಾನಿ, ರಾಜ್ಯಸಭೆಯ ಸದಸ್ಯರು ಫೋನ್ ಮಾಡಿದ್ರೆ ಫೋನ್ ತೆಗೆಯೋದಿಲ್ಲ ಎಂದರೇ ಬಹುಶಃ ಜೆಡಿಎಸ್ ನಾಯಕರ ಫೋನ್ ರಿಸೀವ್ ಮಾಡಬೇಡಿ ಎಂದು ನಿರ್ದೇಶನ ಇದೆಯೊ ಏನೋ ಗೊತ್ತಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News