ಬೆಂಗಳೂರು: ಇಂಜಿನಿಯರ್ ಮನೆಯಲ್ಲಿ 7 ಇವಿಎಂ ಕಂಟ್ರೋಲ್ ಯುನಿಟ್ ಗಳು ಪತ್ತೆ

Update: 2023-07-09 17:11 GMT

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಇಂಜಿನಿಯರ್ ಒಬ್ಬರ ಮನೆಯ ನೆಲಸಮ ಮಾಡುವ ಸಂದರ್ಭದಲ್ಲಿ ಏಳು ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಕಂಟ್ರೋಲ್ ಯುನಿಟ್ಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದುಡಪನಹಳ್ಳಿ ಗ್ರಾಮದ ಮನೆಯಲ್ಲಿ ಈ ಇವಿಎಂ ಕಂಟ್ರೋಲ್ ಯುನಿಟ್ಗಳು ಪತ್ತೆಯಾಗಿದ್ದು, ಈ ಮನೆ ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಇಂಜಿನಿಯರ್ ಶಿವಕುಮಾರ್ ಅವರದ್ದಾಗಿದೆ ಎಂದು ತಿಳಿದುಬಂದಿದೆ.

ಇವು 2018ರ ಚುನಾವಣೆಯಲ್ಲಿ ಬಳಸಿ ತಿರಸ್ಕೃತಗೊಂಡಿದ್ದ ಇವಿಎಂ ಕಂಟ್ರೋಲ್ ಯುನಿಟ್ಗಳಾಗಿವೆ. ಇವುಗಳ ಪತ್ತೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಈ ಮನೆಯನ್ನು ನೆಲಸಮಗೊಳಿಸಲಾಗಿದೆ. ಈ ಮನೆಯಿಂದ 7 ಇವಿಎಂಗಳನ್ನು ವಶಕ್ಕೆ ಪಡೆದ ತಹಶೀಲ್ದಾರ್, ಅವುಗಳನ್ನು ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ಹಸ್ತಾಂತರಿಸಿ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News