ಬಜೆಟ್ ನಲ್ಲಿ ಏನೂ ಇಲ್ಲದ ಕಾರಣ ವಿತ್ತ ಸಚಿವರು ಕೇವಲ 59 ನಿಮಿಷದಲ್ಲಿ ಓದಿ ಮುಗಿಸಿಬಿಟ್ಟರು: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು: "ಒಕ್ಕೂಟ ಸರ್ಕಾರದ 2024ರ ಬಜೆಟ್ ನಲ್ಲಿ ಏನೂ ಇಲ್ಲದ ಕಾರಣ ವಿತ್ತ ಸಚಿವರು ಕೇವಲ 59 ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿಬಿಟ್ಟರು!" ಎಂದು ಕೇಂದ್ರ ಬಜೆಟ್ ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, “ಒಕ್ಕೂಟ ಸರ್ಕಾರದ 2024ರ ಬಜೆಟ್ ನಲ್ಲಿ ಎನೂ ಇಲ್ಲದ ಕಾರಣ ವಿತ್ತ ಸಚಿವರು ಕೇವಲ 59 ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿಬಿಟ್ಟರು! ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಎಳ್ಳು ಕಾಳಿನಷ್ಟು ಉಪಯೋಗವಿಲ್ಲ, ಉದ್ಯಮಿ ಗೆಳೆಯರ ಆದಾಯ ದುಪ್ಪಟ್ಟಾಗಿದ್ದನ್ನು ದೇಶದ ಜನರ ತಲಾದಾಯವೆನ್ನುತ್ತಿರುವುದು ಹಾಸ್ಯಸ್ಪದ” ಎಂದು ಕೇಂದ್ರದ ಬಜೆಟ್ ಅನ್ನು ಟೀಕಿಸಿದೆ.
“ನೀರಾವರಿ ಯೋಜನೆಗಳಿಗೆ ಹಣವಿಲ್ಲ, ಅಭಿವೃದ್ಧಿ ಕಾರ್ಯಕ್ರಮಗಳ ಸುಳಿವಿಲ್ಲ. ಜನ ಕಲ್ಯಾಣ ಕಾರ್ಯಕ್ರಮಗಳಿಲ್ಲ. ರೈಲ್ವೆ, ರಸ್ತೆ ವಿಸ್ತರಣೆಯ ಪ್ರಸ್ತಾಪವಿಲ್ಲ. ಕರ್ನಾಟಕಕ್ಕಂತೂ ಬಿಡಿಗಾಸು ದೊರೆತಿಲ್ಲ, ಉಪನಗರ ರೈಲಿನ ಬಗ್ಗೆ ಚಕಾರವಿಲ್ಲ. ಕರ್ನಾಟಕಕ್ಕೆ ಅನುದಾನ ವಂಚನೆಯಾದರೂ ಬಾಯಿ ಮುಚ್ಚಿಕೊಂಡು ಕುಳಿತ ಬಿಜೆಪಿಯ A + B ಟೀಮಿನ 27 ಸಂಸದರಿಂದ ಕರ್ನಾಟಕಕ್ಕೆ ಮಹಾದ್ರೋಹವಾಗುತ್ತಿದೆ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಒಕ್ಕೂಟ ಸರ್ಕಾರದ 2024ರ ಬಜೆಟ್ ನಲ್ಲಿ ಎನೂ ಇಲ್ಲ ಇಲ್ಲದ ಕಾರಣ ವಿತ್ತ ಸಚಿವರು ಕೇವಲ 59 ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿಬಿಟ್ಟರು!
— Karnataka Congress (@INCKarnataka) February 1, 2024
ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಎಳ್ಳು ಕಾಳಿನಷ್ಟು ಉಪಯೋಗವಿಲ್ಲ,
ಉದ್ಯಮಿ ಗೆಳೆಯರ ಆದಾಯ ದುಪ್ಪಟ್ಟಾಗಿದ್ದನ್ನು ದೇಶದ ಜನರ ತಲಾದಾಯವೆನ್ನುತ್ತಿರುವುದು ಹಾಸ್ಯಸ್ಪದ.
ನೀರಾವರಿ ಯೋಜನೆಗಳಿಗೆ ಹಣವಿಲ್ಲ, ಅಭಿವೃದ್ಧಿ ಕಾರ್ಯಕ್ರಮಗಳ ಸುಳಿವಿಲ್ಲ,
— Karnataka Congress (@INCKarnataka) February 1, 2024
ಜನ ಕಲ್ಯಾಣ ಕಾರ್ಯಕ್ರಮಗಳಿಲ್ಲ,
ರೈಲ್ವೆ, ರಸ್ತೆ ವಿಸ್ತರಣೆಯ ಪ್ರಸ್ತಾಪವಿಲ್ಲ.
ಕರ್ನಾಟಕಕ್ಕಂತೂ ಬಿಡಿಗಾಸು ದೊರೆತಿಲ್ಲ,
ಉಪನಗರ ರೈಲಿನ ಬಗ್ಗೆ ಚಕಾರವಿಲ್ಲ,
ಕರ್ನಾಟಕಕ್ಕೆ ಅನುದಾನ ವಂಚನೆಯದರೂ ಬಾಯಿ ಮುಚ್ಚಿಕೊಂಡು ಕುಳಿತ ಬಿಜೆಪಿಯ A + B ಟೀಮಿನ 27 ಸಂಸದರಿಂದ…