ಆನೆ ದಂತಗಳ ಮಾರಾಟಕ್ಕೆ ಯತ್ನ: 8 ಮಂದಿ ಆರೋಪಿಗಳ ಬಂಧನ

Update: 2023-10-11 16:16 GMT

ಆನೆ ದಂತ - ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.11: ರಾಮನಗರ ಜಿಲ್ಲೆಯ ಕೋಡಿಹಳ್ಳಿ ಹುಣಸನಹಳ್ಳಿ ವ್ಯಾಪ್ತಿಯಲ್ಲಿ ವನ್ಯಜೀವಿ(ಸಂರಕ್ಷಣಾ) ಕಾಯ್ದೆ ಉಲ್ಲಂಘಿನೆ ಮಾಡಿ ಆನೆ ದಂತಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಎಂಟು ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಅಕ್ರಮವಾಗಿ ಆನೆದಂತ ಮಾರಾಟ ಯತ್ನ ನಡೆಯುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಬೆಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿಗಳು, ಅಪರಾಧ ನಿಯಂತ್ರಣ ಕೋಶದ ಸಿಬ್ಬಂದಿಗಳು ಹುಣಸನಹಳ್ಳಿ-ಕನಕಪುರ ರಸ್ತೆಯ ಮರಿದೇವರದೊಡ್ಡಿ ಕ್ರಾಸ್ ಬಳಿ ವಾಹನಗಳ ತಪಾಸಣೆ ನೆಡೆಸಿ ಎಂಟು ಜನ ಆರೋಪಿಗಳಾದ ಐಯ್ಯನ್‍ಕುಟ್ಟಿ(53), ರತ್ನ(46), ಕೃಷ್ಣಮೂರ್ತಿ ಗೋಪಾಲ್(35), ನಾರಾಯಣಸ್ವಾಮಿ(50), ದಿನೇಶ್(42), ರವಿ(44), ಮನೋಹರ್ ಪಾಂಡೆ(61), ವೆಂಕಟೇಶ್(51) ರನ್ನು ಬಂಧಿಸಿದ್ದಾರೆ.

ಒಟ್ಟು ಒಂಬತ್ತು ಆನೆ ದಂತದ ತುಂಡುಗಳನ್ನು ಹಾಗೂ ಕೃತ್ಯದಲ್ಲಿ ಉಪಯೋಗಿಸಿದ್ದ ಹಳದಿ ಬಣ್ಣದ ನಾಮಫಲಕವುಳ್ಳ ಬಿಳಿ ಬಣ್ಣದ ಮಹೀಂದ್ರ ಜೈಲೋ ಕಾರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News