ರಾಜ್ಯದ ಇಬ್ಬರು IPS ಅಧಿಕಾರಿಗಳಿಗೆ 'ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ' ಗೌರವ; 18 ಮಂದಿಗೆ ವಿಶಿಷ್ಟ ಸೇವಾ ಪದಕ

Update: 2023-08-14 17:25 GMT

ಬೆಂಗಳೂರು, ಆ.14: ಸ್ವಾತಂತ್ರೋತ್ಸವದ ಪ್ರಯುಕ್ತ ಕೇಂದ್ರ ಗೃಹ ಸಚಿವಾಲಯ ನೀಡುವ ‘ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ' ಗೌರವಕ್ಕೆ ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಭಾಜನರಾಗಿದ್ದಾರೆ.

18 ಮಂದಿ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಶ್ಲಾಘನೀಯ ಸೇವಾ ಪದಕ ದೊರೆತಿದೆ. ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಹಾಗೂ ವಿಶಿಷ್ಟ ಸೇವೆಯನ್ನು ಗುರುತಿಸಿ ಸೇವಾ ಪದಕದೊಂದಿಗೆ ಗೌರವಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಪದಕ ಪಡೆದ ಅಧಿಕಾರಿಗಳ ವಿವರ: ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಗೌರವಕ್ಕೆ ಬೆಂಗಳೂರು ಕೆಎಸ್‍ಆರ್‍ಪಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹಾಗೂ ಬೆಂಗಳೂರು ಸಂವಹನ ಮತ್ತು ಆಧುನೀಕರಣ ಪೆÇಲೀಸ್ ಸಂಪರ್ಕ ವಿಭಾಗದ ಎಡಿಜಿಪಿ ಎಸ್.ಮುರುಗನ್ ಪಾತ್ರರಾಗಿದ್ದಾರೆ.

ಪೆÇಲೀಸ್ ಶ್ಲಾಘನೀಯ ಸೇವಾ ಪದಕ ಗೌರವಕ್ಕೆ ಬೆಂಗಳೂರು ಕೆಎಸ್‍ಆರ್‍ಪಿಯ ಐಜಿಪಿ ಸಂದೀಪ್ ಪಾಟೀಲ್, ಬೆಂಗಳೂರು ಪೆÇಲೀಸ್ ಪ್ರಧಾನ ಕಚೇರಿಯ ಡಿವೈಎಸ್ಪಿ ಬಿ.ಎಸ್.ಮೋಹನ್ ಕುಮಾರ್, ಬೆಂಗಳೂರು ವಿ.ವಿ.ಪುರಂ ಉಪ ವಿಭಾಗದ ಎಸಿಪಿ ಜಿ.ನಾಗರಾಜ್, ಮೈಸೂರು ಕರ್ನಾಟಕ ಪೊಲೀಸ್ ಅಕಾಡೆಮಿಯ ಸಹಾಯಕ ನಿರ್ದೇಶಕ ಶಿವಶಂಕರ್, ಬೆಂಗಳೂರು ಕರ್ನಾಟಕ ಲೋಕಾಯುಕ್ತದ ಡಿವೈಎಸ್ಪಿ ಬಿ.ಗಿರೀಶ್, ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಯ ಎಸಿಪಿ ಎಚ್.ಎಸ್.ಜಗದೀಶ್, ಬೆಂಗಳೂರು ಸಿಐಡಿ ಡಿವೈಎಸ್ಪಿ ಜಿ.ಕೇಶವಮೂರ್ತಿ, ಬೆಂಗಳೂರು ಸಿಐಡಿ ಡಿವೈಎಸ್ಪಿ ಎಂ.ಎನ್.ನಾಗರಾಜು, ಬೆಂಗಳೂರು ಸಿಐಡಿ ಡಿವೈಎಸ್ಪಿ ಬಿ.ಎನ್.ಶ್ರೀನಿವಾಸ್, ಬೆಂಗಳೂರು ಸಿಐಡಿ ಡಿವೈಎಸ್ಪಿ ಅಂಜುಮಾಲ ಟಿ.ನಾಯ್ಕ, ಬೆಂಗಳೂರು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್‍ಪೆಕ್ಟರ್ ಅನಿಲ್ ಕುಮಾರ್ ಪಿ. ಗ್ರಾಂಪುರೋಹಿತ್, ಬೆಂಗಳೂರು ಸದಾಶಿವ ನಗರ ಸಂಚಾರ ಪೊಲೀಸ್ ಠಾಣೆಯಪೊಲೀಸ್ ಇನ್ಸ್‍ಪೆಕ್ಟರ್ ಅಶೋಕ್ ಆರ್.ಪಿ, ರಾಮನಗರದ ತಾವರೆಕೆರೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ರಾಮಪ್ಪ ಬಿ.ಗುತ್ತೇರ್, ಉಡುಪಿಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಹೆಡ್‍ಕಾನ್ಸ್‍ಟೇಬಲ್ ಶಂಕರ, ರಾಯಚೂರು ಡಿಪಿಒ ಹೆಡ್ ಕಾನ್ಸ್‍ಟೇಬಲ್ ವೆಂಕಟೇಶ್.ಕೆ, ಬೆಂಗಳೂರು ರಾಜ್ಯ ಅಪರಾಧ ದಾಖಲೆಗಳ ವಿಭಾಗದ ಹೆಡ್‍ಕಾನ್ಸ್‍ಟೇಬಲ್ ಕುಮಾರ್.ಎಸ್ ಸೇರಿ 18 ಅಧಿಕಾರಿಗಳು ಭಾಜನರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News