ಬೆಳಗಾವಿ: ಮಹಿಳೆಯ ವಿವಸ್ತ್ರ ಪ್ರಕರಣ; ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ಹೀಗೆ..

Update: 2023-12-12 11:59 IST
ಬೆಳಗಾವಿ: ಮಹಿಳೆಯ ವಿವಸ್ತ್ರ ಪ್ರಕರಣ; ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ಹೀಗೆ..
  • whatsapp icon

ಬೆಳಗಾವಿ: ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದ ಮಹಿಳೆಯೊಬ್ಬರ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿ ಗೃಹಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ.

ಸುವರ್ಣ ಸೌಧದಲ್ಲಿ ಮಾತನಾಡಿದ ಅವರು,  ಅಶೋಕ್, ಪ್ರಿಯಾಂಕ ಎಂಬ ಯವಕ ಯುವತಿಯರಿಬ್ಬರು ಓಡಿಹೋಗಿ ಮದುವೆಯಾಗಿದ್ದಾರೆಂಬ ಮಾಹಿತಿ ಇದೆ. ಅದಕ್ಕೆ ಹುಡುಗಿ ಕಡೆಯವರು ಮನೆಗೆ ನುಗ್ಗಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಪರಸ್ಪರ ಇಷ್ಟ ಪಟ್ಟು‌ಮದುವೆಯಾಗ್ತಾರೆ. ಕೆಲವೊಮ್ಮೆ ಒಪ್ಪಿಗೆ ಅಥವಾ ಬಾರಿ ವಿರೋಧ ವ್ಯಕ್ತವಾಗುತ್ತೆ. ಹೆಣ್ಣುಮಕ್ಕಳನ್ನು ಕತ್ತರಿಸಿದ್ದೂ ನೋಡಿದ್ದೇವೆ. ಆದರೆ ಇದು ಸಮಾಜ ತಲೆ ತಗ್ಗಿಸುವಂತಹ ಕೆಲಸವಾಗಿದ್ದು, ಓಡಿಹೋದವರನ್ನು ಹುಡಕುವ ಪ್ರಯತ್ನ ನಡೆದಿದೆ. ಅವರಿಗೆ ನಾವು ರಕ್ಷಣೆ ಕೊಡಬೇಕಿದೆ ಎಂದು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News