ಇನ್ನು ಮುಂದೆ ಗಣೇಶ ಮೆರವಣಿಗೆಗೆ ಅವಕಾಶ ನೀಡದಿರಲು ಬೆಂಗಳೂರು ಪೊಲೀಸ್ ಆಯುಕ್ತರ ಸೂಚನೆ

Update: 2023-10-11 08:42 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.11: ಗಣೇಶ ಮೆರವಣಿಗೆ ವೇಳೆ ನಗರದಲ್ಲಿ ನಡೆದ ಸಾಲು ಸಾಲು ಘಟನೆಗಳ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು ಇನ್ಮುಂದೆ ಗಣೇಶ ಮೆರವಣಿಗೆಗೆ ಅನುಮತಿ ನೀಡದಂತೆ ಪೊಲೀಸ್ ಆಯುಕ್ತ ಬಿ. ದಯಾನಂದ್ ನಗರದ ಎಲ್ಲಾ ಪೊಲೀಸರಿಗೂ ಸೂಚನೆ ನೀಡಿದ್ದಾರೆ.

ಗಣೇಶ ಮೆರವಣಿಗೆ ವೇಳೆ ನಗರದ ಹಲವು ಕಡೆಗಳಲ್ಲಿ ಗಲಾಟೆಗಳು ನಡೆದಿವೆ. ಹಲಸೂರು, ಯಡಿಯೂರು, ಆಡುಗೋಡಿ ಸೇರಿ ಹಲವು ಕಡೆಗಳಲ್ಲಿ ಗಲಾಟೆಗಳು ನಡೆದಿವೆ. ಅಲ್ಲದೆ ಆಡುಗೋಡೆ ಬಳಿ ಮೆರವಣಿಗೆ ವೇಳೆ ಆದ ಗಲಾಟೆಯಲ್ಲಿ ಶ್ರೀನಿವಾಸ್ ಎಂಬ ಕೊರಿಯರ್ ಯುವಕನ ಕೊಲೆಯಾಗಿದ್ದಾನೆ. ಹೀಗಾಗಿ ಗಣೇಶ ಮೆರವಣಿಗೆಗೆ ಅನುಮತಿ ನೀಡದಿರಲು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಹಬ್ಬ ಮುಗಿದು ಹಲವಾರು ದಿನ ಕಳೆದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹೀಗಾಗಿ ನಗರದಲ್ಲಿ ಇನ್ಮುಂದೆ ಗಣೇಶ ಮೆರವಣಿಗೆಗೆ ಅನುಮತಿ ನೀಡದಂತೆ ಕಮೀಷನರ್ ಸೂಚನೆ ನೀಡಿದ್ದಾರೆ. ಇನ್ನು ಕಮಿಷನರ್ ಸೂಚನೆ ಬಳಿಕವೂ ಅನಮತಿ ಕೋರಿ ಸಾಲು ಸಾಲು ಮನವಿಗಳು ಬರುತ್ತಿವೆ. ಸುಮಾರು 200ಕ್ಕೂ ಹೆಚ್ಚು ಜನ ಗಣೇಶ ಮೆರವಣಿಗೆಗೆ ಅನುಮತಿ ನೀಡುವಂತೆ ಪತ್ರ ಬರೆದಿದ್ದಾರೆ. ಯಾವುದೇ ಕಾರಣಕ್ಕೂ ಅನುಮತಿ ಕೊಡಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಬ್ಬ ಮುಗಿದ್ರೂ ಏರಿಯಾ ಏರಿಯಾಗಳಲ್ಲಿ ಜನ ಗಣಪತಿ ಇಡ್ತಾಯಿದಾರೆ. ಪೊಲೀಸರ ಮಾಹಿತಿ ಪ್ರಕಾರ ಇನ್ನೂ 450 ಗಣಪತಿಗಳು ನಗರದಲ್ಲಿ ಇಟ್ಟಿದ್ದಾರೆ.

ಸದ್ಯ ಈಗ ಮೆರವಣಿಗೆ, ಡಿಜೆಗೆ ಅನುಮತಿ ಕೋರಿ ಪತ್ರ ಬರೆಯುತ್ತಿದ್ದಾರೆ. ಆದರೆ ಮೆರವಣಿಗೆ ವೇಳೆ ನಡೆದ ಗಲಾಟೆ, ಕೊಲೆ ಹಿನ್ನಲೆ ಇನ್ಮುಂದೆ ಅನುಮತಿ ಕೊಡದಿರಲು ಪೊಲೀಸರು ಮುಂದಾಗಿದ್ದಾರೆ. ಮೆರವಣಿಗೆ ಮಾಡಿದರೆ, ಗಲಾಟೆ ಆದರೆ ಅದಕ್ಕೆ ಠಾಣಾ ಇನ್ಸ್ಪೆಕ್ಟರ್ ನೇರ ಹೊಣೆ. ಆ ಠಾಣಾ ಇನ್ಸ್ಪೆಕ್ಟರ್ ಮೇಲೆ ಕ್ರಮ ಜರುಗಿಸುವುದಾಗಿ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.



 ಪೊಲೀಸ್ ಆಯುಕ್ತ ಬಿ. ದಯಾನಂದ್

 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News