ಬಾಣಂತಿಯರ-ಶಿಶುಗಳ ಸಾವು : ಸತ್ಯಶೋಧನೆಗೆ ತಂಡ ರಚಿಸಿದ ಬಿಜೆಪಿ
Update: 2024-12-29 16:30 GMT
ಬೆಂಗಳೂರು : ರಾಜ್ಯಾದ್ಯಂತ ಆಗುತ್ತಿರುವ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸಾವುಗಳ ಕುರಿತು ಸಮಗ್ರ ವರದಿಯನ್ನು ನೀಡಲು ಸತ್ಯಶೋಧನಾ ತಂಡವನ್ನು ರಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ಈ ತಂಡದಲ್ಲಿ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಅವಿನಾಶ್ ಜಾಧವ್, ಡಾ.ಚಂದ್ರು ಲಮಾಣಿ, ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ್ ಕೇಲಗಾರ, ರಾಜ್ಯ ಕಾರ್ಯದರ್ಶಿ ಡಾ.ಲಕ್ಷ್ಮೀ ಅಶ್ವಿನ್‍ಗೌಡ, ರಾಜ್ಯ ಸಂಚಾಲಕರಾದ ಡಾ.ನಾರಾಯಣ್, ಡಾ.ಅರುಣಾ, ರಾಜ್ಯ ಖಜಾಂಚಿ ವಿಜಯಲಕ್ಷ್ಮೀ ಕರೂರು, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ಬಾ.ತುಂಗಳ, ಮಹಿಳಾ ಮೋರ್ಚಾ ಮಾಜಿ ಉಪಾಧ್ಯಕ್ಷೆ ಡಾ.ಪದ್ಮ ಪ್ರಕಾಶ್, ಬಿಜೆಪಿ ಮುಖಂಡರಾದ ಡಾ.ಸುಧಾ ಹಲ್ಕಾಯಿ, ರತನ್ ರಮೇಶ್ ಪೂಜಾರಿ, ಪ್ರದೀಪ್ ಕಡಾಡಿ, ಮಂಜುಳಾ, ಅಶೋಕ್‍ಗೌಡ ಸದಸ್ಯರಾಗಿದ್ದಾರೆ.