ಅಭಿವೃದ್ಧಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

Update: 2025-01-01 14:20 GMT

ಬೆಂಗಳೂರು: ಕರ್ನಾಟಕ ಸರಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಸಾಲಿನ ಪರಿಸರ ಪತ್ರಿಕೋದ್ಯಮ ಮತ್ತು ಅಭಿವೃದ್ದಿ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿಜಯಲಕ್ಷ್ಮೀ ಶಿಬರೂರು ಸೇರಿ 14 ಪತ್ರಕರ್ತರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ವಿಜಯಲಕ್ಷ್ಮಿ ಶಿಬರೂರು(2017), ಬಿ.ಎಂ.ಟಿ ರಾಜೀವ್ (2018), ವಿನೋದಕುಮಾರ್ ಬಿ. ನಾಯ್ಕ (2019), ಮಾಲತೇಶ ಅಂಗೂರ(2020), ಸುಧೀರ್ ಶೆಟ್ಟಿ(2021), ಮಲ್ಲಿಕಾರ್ಜುನ ಹೊಸಪಾಳ್ಯ(2022) ಮತ್ತು ಆರ್. ಮಂಜುನಾಥ್(2023) ಆಯ್ಕೆಯಾಗಿದ್ದಾರೆ.

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಚೀ.ಜ.ರಾಜೀವ್(2017), ದೇವಯ್ಯ ಗುತ್ತೇದಾರ್(2018), ಗಿರೀಶ್ ಲಿಂಗಣ್ಣ(2019), ಯೋಗೇಶ್ ಎಂ.ಎನ್.(2020), ನೌಶಾದ್ ಬಿಜಾಪುರ(2021), ಸತೀಶ್ ಜಿ.ಟಿ.(2022), ಎಸ್.ಗಿರೀಶ್ ಬಾಬು(2023) ಆಯ್ಕೆಯಾಗಿದ್ದಾರೆ.

ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿದ್ದ 2017ರಿಂದ 2023ರ ವರೆಗಿನ ಏಳು ವರ್ಷಗಳ ಅವಧಿಯ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಹಾಗೂ ಕೆ.ಶಿವಕುಮಾರ್ ಇದ್ದ ಸಮಿತಿಯು ಆಯ್ಕೆ ಮಾಡಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂ. ನಗದು, ಸ್ಮರಣಿಕೆ, ಅಭಿನಂದನಾ ಪತ್ರ ಒಳಗೊಂಡಿರುತ್ತದೆ.

ಶೀಘ್ರದಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News