ಶ್ರೀರಾಮಸೇನೆಯಿಂದ ಕಾರ್ಯಕರ್ತರಿಗೆ ಬಂದೂಕು ತರಬೇತಿ ; ರಾಜ್ಯದ ಹಲವೆಡೆ ಶಿಬಿರ,186 ಮಂದಿಗೆ ತರಬೇತಿ!

Update: 2025-01-03 17:22 GMT

ಬಾಗಲಕೋಟೆ : ಶ್ರೀರಾಮಸೇನೆಯು ತನ್ನ ಕಾರ್ಯಕರ್ತರಿಗೆ ಆರು ದಿನಗಳ ಕಾಲ ಬಂದೂಕು ಮತ್ತು ಯುದ್ಧಕಲೆ ತರಬೇತಿ ನೀಡಿರುವ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಎಂಬ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ವ್ಯಕ್ತಿತ್ವ ವಿಕಸನ ಹಾಗೂ ಸ್ವಸುರಕ್ಷೆಗಾಗಿ ವಿವಿಧ ಶಾರೀರಿಕ ರಕ್ಷಾ ತರಬೇತಿ ಎಂಬ ಹೆಸರಿನಲ್ಲಿ ಬಂದೂಕು ತರಬೇತಿ ನೀಡಲಾಗಿದೆ. ಸೇನಾ ತರಬೇತಿ ಮಾದರಿಯಲ್ಲಿ ತರಬೇತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ನಡೆದ ಶಿಬಿರದಲ್ಲಿ ದಂಡ ಪ್ರಯೋಗ, ಏರ್ ಗನ್ ಮೂಲಕ ಗನ್ ಟ್ರೈನಿಂಗ್, ಕರಾಟೆ, ಮುಳ್ಳುಗಂಟಿಯ ಗುಂಡಿಯಲ್ಲಿ ಹಾದುಹೋಗುವುದು, ಸಂದಿಗ್ಧ ಸ್ಥಳಗಳಲ್ಲಿ ಪಾರಾಗುವುದು, ಬಂದೂಕು ಬಳಕೆ, ಟಾರ್ಗೆಟ್ ಸೆಟ್ ಮಾಡಿ ಗುರಿ ಇಟ್ಟು ಹೊಡೆಯುವ ತರಬೇತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಶ್ರೀರಾಮ ಸೇನೆಯು ಈ ರೀತಿ ರಾಜ್ಯಾದ್ಯಂತ 186 ಮಂದಿ ತನ್ನ ಕಾರ್ಯಕರ್ತರಿಗೆ ತರಬೇತಿ ನೀಡಿದೆ ಎಂದು ಹೇಳಲಾಗುತ್ತಿದೆ. ಶ್ರೀರಾಮ ಸೇನೆಯ ಬಂದೂಕು ತರಬೇತಿ ನೀಡುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ಆತಂಕ ವ್ಯಕ್ತವಾಗಿದ್ದು, ಈ ಬಗ್ಗೆ ಸರಕಾರ ಗಮನಹರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಈ ವಿಷಯ ನಮ್ಮ ಗಮನಕ್ಕೆ ಬಂದಿದ್ದು, ಈ ಘಟನೆ ಎಲ್ಲಿ ಆಗಿದೆ, ಯಾವಾಗ ನಡೆದಿದೆ ಎಂಬ ಬಗ್ಗೆ ತನಿಖೆ ಮಾಡಲಾಗುವುದು. ತನಿಖೆಯ ನಂತರ ಏನಾದರೂ ಲೋಪದೋಷ ಕಂಡುಬಂದರೆ, ಕಾನೂನು ಪ್ರಕಾರ ಕ್ರಮಕೈಗೊ‍ಳ್ಳಲಾಗುವುದು.

ಎಂ.ಡಿ.ಮಡ್ಡಿ, ಸಿಪಿಐ ಜಮಖಂಡಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News