23 ಐಎಫ್‍ಎಸ್ ಅಧಿಕಾರಿಗಳಿಗೆ ಭಡ್ತಿ ನೀಡಿ ರಾಜ್ಯ ಸರಕಾರ ಆದೇಶ

Update: 2024-12-31 17:50 GMT

ಬೆಂಗಳೂರು : ರಾಜ್ಯ ಸರಕಾರವು 23 ಐಎಫ್‍ಎಸ್ ಅಧಿಕಾರಿಗಳಿಗೆ ಭಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಭೂ ದಾಖಲೆ)-ಮನೋಜ್ ಕುಮಾರ್ ತ್ರಿಪಾಠಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಾಮಾಜಿಕ ಅರಣ್ಯ ಮತ್ತು ಯೋಜನೆ)-ಉಪೇಂದ್ರ ಪ್ರತಾಪ್ ಸಿಂಗ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ-ತಾಖತ್ ಸಿಂಗ್ ರಣಾವತ್, ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ-ಯಶಪಾಲ್ ಕ್ಷೀರಸಾಗರ್.

ಅರಣ್ಯ ಸಂರಕ್ಷಣಾಧಿಕಾರಿ-ಡಿ.ಮಹೇಶ್ ಕುಮಾರ್, ಹಾಸನ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ-ಎಡುಕೊಂಡಲು ವಿ., ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರಿನ ಅರಣ್ಯ ಸಂರಕ್ಷಣಾಧಿಕಾರಿ(ಕಾರ್ಯ ಯೋಜನೆ)-ಸೋನಲ್ ವೃಷ್ಣಿ, ಕೇಂದ್ರ ಸೇವೆಯ ನಿಮಿತ್ತ ಮಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಡಕಾಡಮಿಯ ಉಪ ನಿರ್ದೇಶಕಿ -ದೀಪ್ ಜಿ.ಕಂಟ್ರಾಕ್ಟರ್.

ಬೀದರ್ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ವಾಸಂತಿ ಎಂ.ಎಂ., ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಮಾರಿಯ ಕ್ರಿಸ್ತು ರಾಜ ಡಿ., ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಗಣಪತಿ ಕೆ., ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಮೋಹನ್ ಕುಮಾರ್ ಡಿ., ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಆಶಿಶ್ ರೆಡ್ಡಿ ಎಂ.ವಿ., ವಿಜಯನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಅರ್ಸಲಾನ್.

ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಡಾ.ಅಜ್ಜಯ್ಯ ಜಿ.ಆರ್., ಮಲೆ ಮಹದೇಶ್ವರ ಬೆಟ್ಟ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಡಾ.ಸಂತೋಷ್ ಕುಮಾರ್ ಜಿ., ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಶಿವಶಂಕರ್ ಈ., ಚಿತ್ರದುರ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ರಾಜಣ್ಣ ಟಿ.

ಯಾದಗಿರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಪ್ರಭಾಕರ್ ಪ್ರಿಯದರ್ಶಿನಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಕಾಜಲ್ ಅಜಿತ್ ಪಾಟೀಲ್, ಬೆಂಗಳೂರಿನ ಕಾಡುಗುಡಿಯ ಎಫ್‍ಟಿಎಟಿಐ ಉಪ ಅರಣ್ಯ ಸಂರಕ್ಷಣಾಧಿಕಾರಿ-ಅಭಿಶೇಕ್ ವಿ. ಹಾಗೂ ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ-ಪುಲ್ಕೀತ್ ಮೀನಾ ಅವರನ್ನು ಭಡ್ತಿ ನೀಡಿ ಸರಕಾರ ಆದೇಶ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News