ಸಾರಿಗೆ ನಿಗಮಗಳಿಗೆ ಸಾಲ ಪಡೆಯಲು ಅನುಮೋದನೆ ನೀಡಿ ಆದೇಶಿಸಿದ ರಾಜ್ಯ ಸರಕಾರ

Update: 2024-12-31 15:12 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ನಾಲ್ಕು ಸಾರಿಗೆ ನಿಗಮಗಳು ನವೆಂಬರ್- 2024ರ ಅಂತ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಭವಿಷ್ಯ ನಿಧಿ ಹಾಗೂ ಇಂಧನದ ಬಾಕಿ ಮೊತ್ತ ಪಾವತಿಸಲು ಒಟ್ಟು 2000 ಕೋಟಿ ರೂ. ಮೊತ್ತದ ಸಾಲವನ್ನು ಹಣಕಾಸು ಸಂಸ್ಥೆಗಳಿಂದ ಪಡೆಯಲು ಅನುಮೋದನೆ ನೀಡಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.

ನಾಲ್ಕು ಸಾರಿಗೆ ನಿಗಮಗಳು ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಹಾಗೂ ಶಾಸನಬದ್ಧ ಪಾವತಿಯಾದ ಭವಿಷ್ಯ ನಿಧಿ ಹಾಗೂ ಇಂಧನದ ಬಾಕಿ ಮೊತ್ತ ಪಾವತಿಸಲು 3728.90 ಕೋಟಿ ರೂ. ಸಾಲದ ಅವಶ್ಯಕತೆ ಇದ್ದು, ಈ ಸಾಲದ ಮರುಪಾವತಿಗೆ ತಗಲುವ ಅಸಲು ಮತ್ತು ಬಡ್ಡಿ ಮೊತ್ತವನ್ನು ಸರಕಾರವು ಭರಿಸಲು ಕೋರಿ, ಸಂಸ್ಥೆಗಳಿಗೆ ಸರಕಾರದ ಸರ್ವೀಸ್ ಲೋನ್ ಅನ್ನು ಪಡೆಯಲು ಅನುಮತಿ ನೀಡಿ ಆದೇಶದಲ್ಲಿ ತಿಳಿಸಲಾಗಿದೆ.

ಕೆಎಸ್ಸಾರ್ಟಿಸಿ 623.80 ಕೋಟಿ ರೂ., ಬಿಎಂಟಿಸಿ 589.20 ಕೋಟಿ ರೂ., ವಾಯುವ್ಯ ಸಾರಿಗೆ ನಿಗಮ 646 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ 141 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News