65 ಮಂದಿ ಐಪಿಎಸ್ ಅಧಿಕಾರಿಗಳಿಗೆ ಭಡ್ತಿ; ರಾಜ್ಯ ಸರಕಾರ ಆದೇಶ

Update: 2024-12-31 17:24 GMT

ಬೆಂಗಳೂರು : ರಾಜ್ಯ ಸರಕಾರವು 65 ಮಂದಿ ಐಪಿಎಸ್ ಅಧಿಕಾರಿಗಳಿಗೆ ಭಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.

ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ-ವಿಕಾಸ್ ಕುಮಾರ್ ವಿಕಾಸ್, ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ-ರಮಣ್ ಗುಪ್ತ, ಬೆಳಗಾವಿ ಉತ್ತರ ವಲಯ ಐಜಿಪಿ-ಡಾ.ಚೇತನ್ ಸಿಂಗ್ ರಾಥೋಡ್, ಮಂಗಳೂರು ಪಶ್ಚಿಮ ವಲಯ ಐಜಿಪಿ-ಅಮಿತ್ ಸಿಂಗ್, ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ-ಎನ್.ಶಶಿಕುಮಾರ್, ಬೆಂಗಳೂರಿನ ಐಜಿಪಿ ಭದ್ರತೆ(ಗುಪ್ತಚರ) ವಿಭಾಗ-ಡಾ.ವೈ.ಎಸ್.ರವಿಕುಮಾರ್.

ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿ-ಸಿ.ವಂಶಿಕೃಷ್ಣ, ಪೊಲೀಸ್ ಕೇಂದ್ರ ಕಚೇರಿ ಆಡಳಿತ ವಿಭಾಗದ ಡಿಐಜಿಪಿ-ಕಾರ್ತಿಕ್ ರೆಡ್ಡಿ, ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ(ಆಡಳಿತ)-ಕುಲದೀಪ್ ಕುಮಾರ್ ಆರ್.ಜೈನ್, ಡಿಐಜಿಪಿ-ವಿನಾಯಕ ವಸಂತರಾವ್ ಪಾಟೀಲ್, ಕೆ.ಸಂತೋಷ್ ಬಾಬು, ಇಶಾ ಪಂತ್, ಸಿಐಡಿ ಅರಣ್ಯ ವಿಭಾಗದ ಡಿಐಜಿಪಿ-ಜಿ.ಸಂಗೀತಾ, ಮೈಸೂರು ನಗರ ಪೊಲೀಸ್ ಆಯುಕ್ತೆ-ಸೀಮಾ ಲಾಟ್ಕರ್.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಐಜಿಪಿ-ರೇಣುಕಾ ಕೆ.ಸುಕುಮಾರ್, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ-ಡಾ.ಭೀಮಾ ಶಂಕರ್ ಎಸ್.ಗುಳೇದ್, ನಾಗರಿಕ ವಿಮಾನಯಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ-ನಿಕಮ್ ಪ್ರಕಾಶ್ ಅಮ್ರಿತ್, ಎಸ್‍ವಿಪಿ ಎನ್‍ಪಿಎ ಸಹಾಐಕ ನಿರ್ದೇಶಕಿ-ಜಿ.ರಾಧಿಕಾ, ಎನ್‍ಐಎ ಪೊಲೀಸ್ ವರಿಷ್ಠಾಧಿಕಾರಿ-ರಾಹುಲ್ ಕುಮಾರ್ ಶಾಹಪುರವಾಡ್, ಹೊಸದಿಲ್ಲಿಯ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಘಟನೆಯ ವಿಜ್ಞಾನಿ-ಧರ್ಮೇಂದ್ರ ಕುಮಾರ್ ಮೀನಾ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ-ಇಳಕ್ಕಿಯ ಕರುಣಾಕರನ್.

ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ-ಜೋಶಿ ಶ್ರೀನಾಥ್ ಮಹಾದೇವ್, ಕಲಬುರಗಿಯ ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ-ಸಿ.ಬಿ.ವೇದಮೂರ್ತಿ, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ-ಕೆ.ಎಂ.ಶಾಂತರಾಜು, ಬೆಳಗಾವಿಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ-ಹನುಮಂತರಾಯ, ಬೆಂಗಳೂರು ನಗರ ಪೂರ್ವ ವಿಭಾಗ ಡಿಸಿಪಿ-ಡಿ.ದೇವರಾಜ, ಬೆಂಗಳೂರು ನಗರ ಉತ್ತರ ವಿಭಾಗ ಡಿಸಿಪಿ(ಸಂಚಾರ)-ಡಿ.ಆರ್.ಸಿರಿಗೌರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ-ಡಾ.ಕೆ.ಧರಣಿ ದೇವಿ.

ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ-ಎಸ್.ಸವೀತಾ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಸಿ.ಕೆ.ಬಾಬಾ, ಬಿಎಂಟಿಸಿ(ಭದ್ರತೆ ಮತ್ತು ವಿಚಕ್ಷಣ) ನಿರ್ದೇಶಕ-ಅಬ್ದುಲ್ ಅಹದ್, ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ-ಎಸ್.ಗಿರೀಶ್, ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಎಂ.ಪುಟ್ಟಮಾದಯ್ಯ, ದಾವಣಗೆರೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ವರಿಷ್ಠಾಧಿಕಾರಿ-ಟಿ.ಶ್ರೀಧರ.

ಪೊಲೀಸ್ ಕೇಂದ್ರ ಕಚೇರಿಯ ಸಹಾಯಕ ಐಜಿಪಿ-ಡಾ.ಎಂ.ಅಶ್ವಿನಿ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ-ಎ.ಎನ್.ಪ್ರಕಾಶ್ ಗೌಡ, ಜಿನೇಂದ್ರ ಖಾನಗಾವಿ, ಗೃಹ ರಕ್ಷಕ ದಳದ ಉಪ ಕಮಾಂಡಂಟ್ ಜನರಲ್-ಜೆ.ಕೆ.ರಶ್ಮಿ, ಕೆಪಿಟಿಸಿಎಲ್ ವಿಚಕ್ಷಣ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ-ಟಿ.ಪಿ.ಶಿವಕುಮಾರ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಎನ್.ವಿಷ್ಣುವರ್ಧನ, ಪೊಲೀಸ್ ಕೇಂದ್ರ ಕಚೇರಿ ಸಹಾಯಕ ಐಜಿಪಿ-ಸಂಜೀವ್ ಎಂ.ಪಾಟೀಲ್.

ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ-ಕೆ.ಪರಶುರಾಮ, ಬೆಂಗಳೂರಿನ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ವರಿಷ್ಠಾಧಿಕಾರಿ-ಎಚ್.ಡಿ.ಆನಂದಕುಮಾರ್, ಪೊಲೀಸ್ ಕೇಂದ್ರ ಕಚೇರಿ ಸಹಾಯಕ ಐಜಿಪಿ-ಕಲಾ ಕೃಷ್ಣಸ್ವಾಮಿ, ಸಿಸಿಬಿ ಡಿಸಿಪಿ-ಆರ್.ಶ್ರೀನಿವಾಸ ಗೌಡ, ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ-ಜಿ.ಕೆ.ಮಿಥುನ್ ಕುಮಾರ್, ಬೀದರ್ ಪೊಲೀಸ್ ವರಿಷ್ಠಾಧಿಕಾರಿ-ಪ್ರದೀಪ್ ಗುಂಟಿ, ಮುಂಬೈ ಸಿಬಿಐ ಪೊಲೀಸ್ ವರಿಷ್ಠಾಧಿಕಾರಿ-ಪಿ.ಕೃಷ್ಣಕಾಂತ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಯತೀಶ್ ಎನ್., ಬೆಂಗಳೂರು ನಗರ ಉತ್ತರ ವಿಭಾಗದ ಡಿಸಿಪಿ-ಸೈದುಲು ಅದಾವತ್.

ಬೆಂಗಳೂರು ಕಮಾಂಡ್ ಸೆಂಟರ್ ಡಿಸಿಪಿ-ಕ್ಷಮ ಮಿಶ್ರಾ, ವೈಟ್‍ಫೀಲ್ಡ್ ವಿಭಾಗದ ಡಿಸಿಪಿ-ಡಾ.ಶಿವಕುಮಾರ್, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಮಲ್ಲಿಕಾರ್ಜುನ ಬಾಳದಂಡಿ, ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಅಮರನಾಥ ರೆಡ್ಡಿ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ-ಪವನ್ ನೆಜ್ಜೂರ್, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಶ್ರೀಹರಿ ಬಾಬು ಬಿ.ಎಲ್.

ಮೈಸೂರಿನ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ-ಗೀತಾ ಎಂ.ಎಸ್., ಕಾರಾಗೃಹ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿ-ಯಶೋಧಾ ವಂಟಗೋಡಿ, ಹುಬ್ಬಳ್ಳಿ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ-ರಾಜೀವ್ ಎಂ., ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಡಾ.ಶೋಭಾರಾಣಿ ವಿ.ಜೆ., ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ-ಡಾ.ಎಸ್.ಕೆ.ಸೌಮ್ಯಲತಾ.

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಡಾ.ಕವಿತಾ ಬಿ.ಟಿ., ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-ಉಮಾ ಪ್ರಶಾಂತ್, ಬೆಂಗಳೂರು ನಗರ ಪೂರ್ವ ವಿಭಾಗದ ಡಿಸಿಪಿ(ಸಂಚಾರ)-ಸಾಹಿಲ್ ಬಾಗ್ಲಾ ಹಾಗೂ ಕಲಬುರಗಿ ಗ್ರಾಮೀಣ ಉಪ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ-ಬಿಂದು ಮಣಿ ಆರ್.ಎನ್. ಅವರಿಗೆ ಭಡ್ತಿ ನೀಡಿ ಆದೇಶಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News