ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ : ಯುವಕ ಸ್ಥಳದಲ್ಲೇ ಮೃತ್ಯು

Update: 2023-10-23 12:10 IST
ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ : ಯುವಕ ಸ್ಥಳದಲ್ಲೇ ಮೃತ್ಯು

ಸಾಂದರ್ಭಿಕ ಚಿತ್ರ

  • whatsapp icon

ಮೈಸೂರು, 23:ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಕರಾಟೆ ಪಟುವೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಮೈಸೂರು ಸಮೀಪ ವರದಿಯಾಗಿದೆ.

ಕಿರಣ್ ರಾಜ್ (22) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ನಿವಾಸಿಯಾದ ಇವರು ಸ್ನೇಹಿತನಿಗೆ ಬೈಕ್ ನೀಡಲು ಮೈಸೂರಿಗೆ ಹೊರಟಿದ್ದರು. ಮೈಸೂರು ಸಮೀಪದ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ.

ರಸ್ತೆ ವಿಭಜಕಕ್ಕೆ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಎಗರಿ ರಸ್ತೆಗೆ ಬಿದ್ದಿರುವ ಕಿರಣ್‌ ರಾಜ್‌, ತೀವ್ರ ಗಾಯಗಳೊಂದಿಗೆ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದು ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News