ಪ್ರಸಕ್ತ ವರ್ಷದಿಂದ ರಾಜ್ಯದ 1,419 ಸರಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿ ಆರಂಭ

Update: 2024-06-15 16:10 GMT

ಸಾಂದರ್ಭಿಕ ಚಿತ್ರ 

ಬೆಂಗಳೂರು: ರಾಜ್ಯದ 1419 ಸರಕಾರಿ ಶಾಲೆಗಳಲ್ಲಿ 2024-25ನೆ ಸಾಲಿನಿಂದಲೇ 1ನೆ ತರಗತಿಯಿಂದ ದ್ವಿಭಾಷಾ(ಕನ್ನಡ ಮತ್ತು ಇಂಗ್ಲಿಷ್) ತರಗತಿಗಳನ್ನು ಪ್ರಾರಂಭಿಸಲು ಸರಕಾರ ಆದೇಶಿಸಿದ್ದು, ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಒಟ್ಟು 872 ಸರಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಪ್ರಾರಂಭಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಬೀದರ್ ನಲ್ಲಿ 97, ಬಳ್ಳಾರಿ 119, ಕಲಬುರಗಿ 165, ಕೊಪ್ಪಳ 109, ರಾಯಚೂರು 176, ವಿಜಯನಗರ 134 ಮತ್ತು ಯಾದಗಿರಿ ಜಿಲ್ಲೆಯಲ್ಲಿ 72 ಶಾಲೆಗಳಲ್ಲಿ ದ್ವಿಭಾಷಾ(ಕನ್ನಡ ಮತ್ತು ಇಂಗ್ಲಿಷ್) ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ. ಕಲ್ಯಾಣ ಕರ್ನಾಟಕದ ವಿಭಾಗದಲ್ಲಿ ಶಿಕ್ಷಣದಲ್ಲಿ ಗುಣಾತ್ಮಕ ಪ್ರಗತಿಯನ್ನು ಸಾಧಿಸಲು ಪ್ರಾಥಮಿಕ ಹಂತದಲ್ಲಿಯೇ ‘ಭದ್ರ ಬುನಾದಿ’ಯನ್ನು ಹಾಕುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ವಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News