NSP ವಿದ್ಯಾರ್ಥಿ ವೇತನಕ್ಕೆ ಬಯೋ ಮೆಟ್ರಿಕ್ ದೃಢೀಕರಣ ಕಡ್ಡಾಯ: ಕಲಬುರಗಿ ಜಿಲ್ಲೆಯ 10 ಸಾವಿರ ವಿದ್ಯಾರ್ಥಿಗಳ ವೇತನ ಕೈತಪ್ಪುವ ಆತಂಕ
ಕಲಬುರಗಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನೀಡಲಾಗುತ್ತಿರುವ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (ಎನ್.ಎಸ್.ಪಿ) ವಿದ್ಯಾರ್ಥಿ ವೇತನ ಪಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರ ಅಗಸ್ಟ್ 28ರ ಒಳಗೆ ಬಯೋ ದೃಢೀಕರಣ ಮಾಡಿಸಿಕೊಳ್ಳಲು ಕಡ್ಡಾಯಗೊಳಿಸಿದೆ. ಇಲಾಖೆಯ ಈ ತರಾತುರಿಯ ಪ್ರಕ್ರಿಯೆಯಿಂದ ಕಲಬುರಗಿ ಜಿಲ್ಲೆಯ 10 ಸಾವಿರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಕೈ ತಪ್ಪುವ ಆತಂಕ ಕಾಡುತ್ತಿದೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 26 ಸಾವಿರ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಪೋಸ್ಟ್ ಮೆಟ್ರಿಕ್, ಮೆರಿಟ್ ಕಮ್ ಮಿನ್ಸ್ ಹಾಗೂ ಪ್ರಿಮೆಟ್ರಿಕ್ ನ 9ನೇ ಮತ್ತು ಹತ್ತನೆ ತರಗತಿಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರದವರೆಗೆ 9 ಸಾವಿರ ವಿದ್ಯಾರ್ಥಿಗಳ ಬಯೋ ಅಥೆಂಟಿಕೇಶನ್ ಪೂರ್ಣಗೊಂಡಿದೆ. ಇನ್ನೂ 17 ಸಾವಿರ ವಿದ್ಯಾರ್ಥಿಗಳ ಬಯೋ ಅಥೆಂಟಿಕೇಶನ್ ಬಾಕಿ ಉಳಿದಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರ ಜಾವಿದ್ ಕರಣಗಿ ಅವರು ʼವಾರ್ತಾ ಭಾರತಿʼಗೆ ಮಾಹಿತಿ ನೀಡಿದರು.
ಸದ್ಯ ಕಲಬುರಗಿ ಜಿಲ್ಲೆಯಲ್ಲಿ 32 ಬಯೋ ಅಥೆಂಟಿಕೇಶನ್ ಶಾಖೆಗಳ ಪ್ರಾರಂಭ ಮಾಡಲಾಗಿತ್ತು, ನಗರದಲ್ಲಿ 17 ಸಿಎಸ್ಸಿಗಳು ಮತ್ತು ತಾಲ್ಲೂಕು ಮಟ್ಟದಲ್ಲಿ 2 ಸಿಎಸ್ಸಿಗಳು ಕಾರ್ಯಾನಿರ್ವಹಿಸುತ್ತಿವೆ, ತಾಲೂಕುಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ನಗರ ಪ್ರದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುರಿಂದ ಸರೂವರ ಸಮಸ್ಯೆ ಇರುವುದರಿಂದ ಸಮಸ್ಯೆ ಕಾಡುತ್ತಿದೆ. ಈಗಾಗಲೇ 400ಕ್ಕೂ ಹೆಚ್ಚಿರುವ ವಿದ್ಯಾರ್ಥಿಗಳು ಹೊಂದಿರುವ ಶಾಲಾ ಕಾಲೇಜುಗಳಲ್ಲಿ ಇಲಾಖೆ ವತಿಯಿಂದ ಸಿಎಸ್ಸಿ ಸಿಬ್ಬಂದಿಗಳು ಬಯೋ ಅಥೆಂಟಿಕೇಶನ್ ಪೂರ್ಣಗೊಳ್ಳಿಸಿ ಟಾರ್ಗೆ ಪೂರ್ಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಅಗಸ್ಟ್ 19 ರಿಂದ ಈ ಕಾರ್ಯಾ ನಡೆಸುತ್ತಿದ್ದು, ಸರ್ವರ್ ಸಮಸ್ಯೆ ಸಹ ಕಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಬಯೋ ಅಥೆಂಟಿಕೇಶನ್ ಆಗದೇ ವೇತನ ಕೈ ತಪ್ಪುವ ಆತಂಕ ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ನಿರ್ಮಾಣವಾಗಿದೆ.
ನಕಲಿ ಅರ್ಜಿಗಳನ್ನು ಪತ್ತೆ ಹಚ್ಚಲು ಬಯೋ ದೃಢೀಕರಣ ಕಡ್ಡಾಯ
ವಿದ್ಯಾರ್ಥಿ ವೇತನದ ಹೆಸರಲ್ಲಿ ನಕಲಿ ಅರ್ಜಿಗಳನ್ನು ಪತ್ತೆ ಹಚ್ಚಲು ಕೇಂದ್ರ ಮತ್ತು ರಾಜ್ಯ ಬಯೋ ಅಥೆಂಟಿಕೇಶನ್ ಕಡ್ಡಾಯಗೊಳಿಸಿ ಆದೇಶ ಹೋರಡಿಸಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ 9ನೇ ತರಗತಿಯಿಂದ ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ತರಬೇತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಎನ್.ಎಸ್.ಪಿಯಿಂದ ಬಯೋ ಅಥೆಂಟಿಕೇಶನ್ ಮಾಡಿಸಿಕೊಳ್ಳಲು ಫಲಾನುಭವಿಗಳ ಮೊಬೈಲಗಳಿಗೆ ಸಂದೇಶ ರವಾನಿಸಲಾಗಿದೆ. ಅಗಸ್ಟ್ ತಿಂಗಳ 8ರಿಂದ ಎಲ್ಲರಿಗೂ ಸಂದೇಶ ಕಳುಹಿಸಲಾಗುತ್ತಿದೆ.
2021-2022ನೇ ಸಾಲಿನ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೆ ಸಿಗಬೇಕಾಗಿತ್ತು. ಕಳೆದ ವರ್ಷದ ವಿದ್ಯಾರ್ಥಿ ವೇತನ ನೀಡುವ ಪ್ರಕ್ರಿಯೆ ಉಳಿಸಿಕೊಂಡು ಇದೀಗ ಏಕಾ ಏಕಿ ಶಾಲಾ ಮತ್ತು ಕಾಲೇಜುಗಳ ಬಯೋ ಅಥೆಂಟಿಕೇಶನ್ ಜೊತೆಗೆ ವಿದ್ಯಾರ್ಥಿಗಳ ಬಯೋ ಅಥೆಂಟಿಕೇಶನ್ ಪಡೆಯುವ ಪ್ರಕ್ರಿಯೆ ಜನರಿಗೆ ಹೈರಾಣ ಮಾಡಲಾಗುತ್ತಿದೆ ಎಂದು ಸ್ಥಳೀಯ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೋಸ್ಟ್ ಮ್ಯಾಟ್ರಿಕ್ ಮತ್ತು ಮೆರಿಟ್ ಕಮ್ ಮಿನ್ಸ್ಇ ವಿದ್ಯಾರ್ಥಿ ವೇತನ ಬಯೋ ಅಥೆಂಟಿಕೇಶನ್ ಮಾಡಿಕೊಳ್ಳಲು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿ ತರಗತಿಗಳು ತಪ್ಪಿಸಿ ಬೆಳಿಗ್ಗೆಯಿಂದ ಕಲಬುರಗಿ ನಗರದ ವಿಧಾನ ಸೌದ ಮೇಲ್ಮಾಹಡಿ ಮತ್ತು ಅಂಜುಮನ್ ಎ ತಹೆರಿಕ್ ಸಭಾಂಗಣದಲ್ಲಿ ಸರದಿ ಸಾಲಿನಲ್ಲಿ ದಿನಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಪ್ರಿಮ್ಯಾಟ್ರಿಕ್ ವೇತನ 1ನೇ ಯಿಂದ 10ನೇ ತರಗತಿ ವಿದ್ಯಾರ್ಥಿಗಳ ಪೋಷಕರು ಇಲಾಕೆಯ ಈ ಹೊಸ ಬೆಳವಣಿಯಿಂದ ಕಂಗೆಟ್ಟಿದ್ದಾರೆ.
-------------------------------------------------
ʼʼಬಯೋ ಅಥೆಂಟಿಕೇಶನ್ ಪ್ರಕ್ರಿಯೆ ದಿನಾಂಕ ನಿಗದಿ ಮತ್ತು ಸಿಎಸ್ಸಿ ಕೇಂದ್ರಗಳ ಸ್ಥಾಪನೆಯಲ್ಲಿ ನಿರ್ಲಕ್ಷ್ಯ ಆತೂರದಿಂದ ವಿದ್ಯಾರ್ಥಿ ವೇತನ ಕೈ ತಪ್ಪು ಆತಂಕ ನಿರ್ಮಾಣವಾಗಿದೆ. ಅ.28 ಕೊನೆ ದಿನವಾಗಿದೆ. ಸರೂವರ್ ಸಮಸ್ಯೆ ಕಾಡುತ್ತಿರುವುದರಿಂದ ಮೂರು ದಿನಗಳಲ್ಲಿ 15 ಸಾವಿರ ವಿದ್ಯಾರ್ಥಿಗಳ ಬಯೋ ಅಥೆಂಟಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸುವುದ ಕಷ್ಟ. 50 ಸಿಎಸ್ಸಿ ಕೇಂದ್ರಗಳು ಹೆಚ್ಚಿಸಬೇಕು. ಬಯೋ ಅಥೆಂಟಿಕೇಶನ್ ದಿನಾಂಕ ಒಂದು ತಿಂಗಳು ಮುಂದಡಬೇಕುʼʼ
- ಸೈಯದ್ ದಸ್ತೇಗಿರ್ ಅಹ್ಮದ್, ಸಮಾಜಿಕ ಕಾರ್ಯಾಕರ್ತ. ಕಲಬುರಗಿ
------------------------------------------------
ʼಕಳೆದ ನಾಲ್ಕು ದಿನಗಳಿಂದ ಕಾಲೇಜು ಬಿಟ್ಟು ಬಯೋ ಅಥೆಂಟಿಕೇಶನಗಾಗಿ ಅಲೆಯುತ್ತಿದ್ದೇನೆ. ಬೆಳಿಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತರ ಬಂದಿರುವ ಕೆಲಸ ಪೂರ್ತಿಯಾಗುತ್ತಿಲ್ಲʼʼ
ಅರ್ಬಾಝ್ ರಟಕಲ್ , ಅಲ್ ಖಮರ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿ ಕಲಬುರಗಿ.
------------------------------------------------
ʼಹೆಚ್ಚಿನ ವಿದ್ಯಾರ್ಥಿಗಳಿಗೆ ಜಾಗೃತಿ ಇಲ್ಲದಿರುವುದರಿಂದ ಹೆಚ್ಚು ವಿದ್ಯಾರ್ಥಿಗಳು ಬಯೋ ದೃಢಿಕರಣದಿಂದ ದೂರು ಉಳಿಯುವ ಸಾಧ್ಯತೆ ಇದೆʼ
- ಸಿರಾಜ್ ಶಾಬ್ದಿ, ಜನತಾ ಪರಿವಾರ ಸಂಘಟನೆಯ ಸಂಸ್ಫಾಕ ಅಧ್ಯಕ್ಷ ಕಲಬುರಗಿ
-----------------------------------------------
ʼʼಪ್ರತಿ ದಿನ 4 ಸಾವಿರ ವಿದ್ಯಾರ್ಥಿಗಳ ಬಯೋ ಅಥೆಂಟಿಕೇಶನ್ ಮಾಡಲಾಗುತ್ತಿದೆ. ಮೂರುದಿನಗಳಲ್ಲಿ ಸಿಎಸ್ಸಿ ಕೇಂದ್ರಗಳು ಹೆಚ್ಚಿಸಿ ಟಾರ್ಗೆ ಪೂರ್ಣಗೊಳ್ಳಿಸಲಾಗುವುದು. ರಾಜ್ಯದಲ್ಲಿ ಬಯೋ ಅಥೆಂಟಿಕೇಶನ್ ಟಾರ್ಗೆಟ್ ರೀಚ್ ಸಂಖ್ಯೆಯಲ್ಲಿ ಕಲಬುರಗಿ ಎರಡನೇ ಸ್ಥಾನದಲ್ಲಿ ಇದೆ. ಅಥೆಂಟಿಕೇಶನ್ ದಿನಾಂಕ ವಿಸ್ತರಣೆ ಆಗುವು ವಿಶ್ವಾಸವಿದೆ. ಅಧಿಕೃತವಾಗಿ ಮಾಹತಿ ಸಿಕ್ಕಿಲ್ಲʼʼ
ಜಾವಿದ್ ಕರಣಗಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಲಬುರಗಿ.
- ಜಾವಿದ್ ಕರಣಗಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಲಬುರಗಿ.