ಹಿಟ್ಲರ್ ನ ಗೊಬೆಲ್ಸ್ ವಂಶಸ್ಥರೇ ಈ ಬಿಜೆಪಿಯವರು: ರಾಮಲಿಂಗಾರೆಡ್ಡಿ

Update: 2023-07-28 15:38 GMT

ರಾಮಲಿಂಗಾರೆಡ್ಡಿ

ಬೆಂಗಳೂರು:ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹತ್ತಿರ ಗೊಬೆಲ್ಸ್ ಎಂಬಾತ ಇದ್ದ ಆತನ ಕೆಲಸ ಸುಳ್ಳು ಹಬ್ಬಿಸುವುದೇ ಆಗಿತ್ತು. ಆದರೆ, ಇದೀಗ ಅವನ ವಂಶಸ್ಥರೇ ಈ ಬಿಜೆಪಿಯವರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಶುಕ್ರವಾರ ಶಾಂತಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯಲ್ಲಿ ಅನವಶ್ಯಕವಾಗಿ ಪ್ರತಿಭಟನೆ ಮಾಡಲಾಗುತ್ತಿದೆ ಅವರಿಗೆ ಮಾನ-ಮರ್ಯಾದೆ ಇಲ್ಲ. ಕೇಂದ್ರ ಮಹಿಳಾ ಆಯೋಗದವರೆ ಅಲ್ಲಿ ಯಾವುದೇ ಹಿಡನ್ ಕ್ಯಾಮರಾ ಇಲ್ಲ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದಿದ್ದಾರೆ. ಆದರೂ ಬಿಜೆಪಿಯವರಿಗೆ ಸೋತರೂ ಕೂಡ ಇನ್ನೂ ಬುದ್ದಿಬಂದಿಲ್ಲ ಎಂದು ಹೇಳಿದರು.

ಬಿಜೆಪಿಯವರದ್ದು ಮೊದಲು 115 ಸ್ಥಾನವಿತ್ತು ಇದೀಗ 65 ಕ್ಕೆ ಇಳಿದಿದೆ. ಇದೇ ರೀತಿ ಮಾಡುತ್ತಿದ್ದರೆ 30 ಸ್ಥಾನಕ್ಕೆ ಕುಸಿಯಲಿದೆ ಎಂದ ಅವರು, ಪ್ರೇಮಿಗಳ ದಿನ ಪಾರ್ಕ್‍ಗಳಿಗೆ ತೆರಳಿ ಪ್ರೇಮಿಗಳಿಗೆ ತೊಂದರೆ ಕೊಡುವುದು. ಬಾರ್-ಪಬ್‍ಗಳಿಗೆ ಹೋಗಿ ಯುವತಿಯರ ಮೇಲೆ ಗಲಾಟೆ ಮಾಡುತ್ತಿದ್ದರು ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News