ಉಪ ಚುನಾವಣೆ: 11 ಗಂಟೆ ವೇಳೆ ಚನ್ನಪಟ್ಟಣ 27.02 ಶೇ., ಶಿಗ್ಗಾಂವಿ 26.01 ಶೇ., ಸಂಡೂರು 25.96 ಶೇ. ಮತದಾನ
ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿರುಸಿನ ಮತದಾನ ಸಾಗಿದೆ. 11 ಗಂಟೆ ವೇಳೆ ಒಟ್ಟು 26.33 ಶೇ. ಮತದಾನವಾಗಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
11 ಗಂಟೆ ವೇಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 27.02 ಶೇ., ಶಿಗ್ಗಾಂವಿಯಲ್ಲಿ 26.01 ಶೇ. ಹಾಗೂ ಸಂಡೂರು 25.96 ಶೇ. ಮತದಾನವಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚಕ್ಕೆರೆ ಗ್ರಾಮದ ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೇ ಮತದಾರರ ಸರತಿ ಸಾಲು ಕಂಡುಬಂದಿತ್ತು. ಇಲ್ಲಿ 85 ವರ್ಷದ ಗೌರಮ್ಮ ಎಂಬವರು ವೀಲ್ ಚೇರ್ ನಲ್ಲಿ ಆಗಮಿಸಿ ಮತಗಟ್ಟೆ ಸಂಖ್ಯೆ 167ರಲ್ಲಿ ಮತದಾನ ಮಾಡಿ ಗಮನಸೆಳೆದರು.
ಸಂಡೂರು ಪಟ್ಟಣದ ಕೃಷ್ಣಾನಗರ ಬಡಾವಣೆಯ ಸರಕಾರಿಯ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 13ರಲ್ಲಿ ಲತೀಫ್ ಸಾಬ್ ಎಂಬ 78 ವರ್ಷದ ವಯೋವೃದ್ಧರೊಬ್ಬರು ವೀಲ್ ಚೇರ್ ಸಹಾಯದೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಸಂಡೂರು ಪಟ್ಟಣದ ಮತಗಟ್ಟೆ ಸಂಖ್ಯೆ 51ರಲ್ಲಿ ಹುಲಿಗೆಮ್ಮ ಎನ್ನುವ 91 ವರ್ಷದ ವಯೋವೃದ್ಧೆ ಮತದಾನ ಮಾಡಿ ಗಮನಸೆಳೆದರು.