ʼನೀಟ್ ಅಕ್ರಮʼಕ್ಕೆ ಕೇಂದ್ರ ಸರಕಾರವೇ ಹೊಣೆ : ಕಾಂಗ್ರೆಸ್

Update: 2024-06-16 12:41 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ‘ನೀಟ್ ಪರೀಕ್ಷೆಯಲ್ಲಿ ಅಕ್ರಮವೇ ನಡೆದಿಲ್ಲ ಎಂದು ಸಮರ್ಥಿಸಿದ ಎನ್‍ಎಟಿಗೆ ಹಾಗೂ ಕೇಂದ್ರ ಸರಕಾರಕ್ಕೆ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ನಾಶವಾಗಿದ್ದು, ಗಂಭೀರ ವಿಷಯ ಎನಿಸಲೇ ಇಲ್ಲ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಬಿಹಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗುತ್ತಲೇ ಇದೆ. ಗುಜರಾತಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರೆ ‘ಪಾಸ್ ಮಾಡಿಸಲಾಗುತ್ತಿತ್ತು’ ಎಂಬ ಸಂಗತಿ ಬೆಳಕಿಗೆ ಬಂದಿದೆ’ ಎಂದು ದೂರಿದೆ.

‘ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟರೆ ಶಿಕ್ಷಕರೇ ಉತ್ತರ ಬರೆಯುತ್ತಿದ್ದರಂತೆ. 30 ಲಕ್ಷ ರೂ.ಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟವಾದ ಸಂಗತಿಯೂ ತಿಳಿದುಬಂದಿದೆ. ಇಷ್ಟೆಲ್ಲಾ ಆದರೂ ಕೇಂದ್ರ ಸರಕಾರ ಮಾತ್ರ ಬಾಯಿಗೆ ಬೀಗ ಜಡಿದು ಕುಳಿತಿರುವುದೇಕೆ?. ವಿದ್ಯಾರ್ಥಿಗಳ ಬದುಕನ್ನು ಭ್ರಷ್ಟಾಚಾರಕ್ಕೆ ಅಡ ಇಟ್ಟಿರುವ ಕೇಂದ್ರ ಸರಕಾರ ಈ ಹಗರಣದ ಹೊಣೆ ಹೊರಬೇಕು’ ಎಂದು ಕಾಂಗ್ರೆಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News