ಚಾಮರಾಜನಗರ: ಮೊಲ, ಕಾಡು ಬೆಕ್ಕುಗಳ ಅಕ್ರಮ ಸಾಗಾಟ; ಆರೋಪಿಗಳ ಬಂಧನ

Update: 2023-10-24 04:21 GMT

ಚಾಮರಾಜನಗರ: ಕಾಡು ಬೆಕ್ಕು ಹಾಗೂ ಮೊಲವನ್ನು ಬೇಟೆಯಾಡಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಐವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಉಪ್ಪುರುಕ ಬಸಪ್ಪ ದೇವಾಲಯ ಬಳಿ ನಡೆದಿದೆ.

ಆರೋಪಿಗಳನ್ನು ಬನ್ನಿತಾಳಪುರದ ಮಹದೇವ ಶೆಟ್ಟಿ ಮತ್ತು ಮಾದಶೆಟ್ಟಿ ಎಂದು ಗುರುತಿಸಲಾಗಿದೆ.

3 ಕಾಡು ಬೆಕ್ಕು 4 ಜೀವಂತ ಮೊಲವನ್ನು ಭೇಟೆ ಮಾಡಿ ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುವಾಗ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಉಳಿದ ಆರೋಪಿಗಳಾದ ಬನ್ನಿತಾಳಪುರದ ಗೋಪಾಲಯ್ಯ, ಕರಿಶೆಟ್ಟಿ,ಮಹೇಶ್ ರವರ ಬಂಧನಕ್ಕೆ ತಂಡ ರಚಿಸಲಾಗಿದ್ದು, ಈಗಾಗಲೇ ಬಂಧಿತರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News