ಚಾಮರಾಜನಗರ: ನಗರಸಭೆ ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ

Update: 2023-06-28 05:15 GMT

ಚಾಮರಾಜನಗರ: ಎರಡು ನಿವೇಶನಗಳ ಜಂಟಿ ಖಾತೆ ಮಾಡಿಸಿಕೊಡಲು 20 ಸಾವಿರ ಲಂಚ ಕೇಳಿದ ಇಲ್ಲಿನ ನಗರಸಭೆಯ ಕಂದಾಯ ಅಧಿಕಾರಿ ನಾರಾಯಣ ಮಂಗಳವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಚಾಮರಾಜನಗರದ ಭ್ರಮರಾಂಬ ಬಡಾವಣೆಯ ನಿವಾಸಿ ಮಾದೇಗೌಡ ಅವರು ನಿವೇಶನಗಳ ಜಂಟಿ ಖಾತೆ ಮಾಡಿಸಲು ನಗರಸಭೆಯಲ್ಲಿ ಅರ್ಜಿ ಹಾಕಿದ್ದರು. ನಾರಾಯಣ ಅವರು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಮಾದೇಗೌಡ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಕಂದಾಯ ಅಧಿಕಾರಿ ನಾರಾಯಣ ಅವರು 18ನೇ ವಾರ್ಡ್‌ನಲ್ಲಿರುವ ತಮ್ಮ ಮನೆಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗ, ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ನಂತರ ಪೊಲೀಸರು ಅವರನ್ನು ನಗರಸಭೆ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದರು.

‘ನಾರಾಯಣ ಅವರನ್ನು ಬಂಧಿಸಿ 20 ಸಾವಿರ ನಗದು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ‍ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News