ಚಿಕ್ಕಮಗಳೂರು: ನೆರೆಮನೆಯ ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ
Update: 2023-12-05 06:05 GMT
ಆರೋಪಿ ಜೇಮ್ಸ್
ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ನಾಯಿಯ ಮಾಲೀಕನ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ.
ಆಸಿಡ್ ದಾಳಿಗೊಳಗಾದ ವ್ಯಕ್ತಿಯನ್ನು ಕುರಗುಂದ ನಿವಾಸಿ ಸುಂದರ್ ರಾಜ್ ಎಂದು ಗುರುತಿಸಲಾಗಿದೆ.
ತಾನು ಸಾಕುತ್ತಿರುವ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ್ ನಾಯಿಗೆ ಬೈಯ್ಯುತ್ತಿದ್ದ. ಆದರೆ ನಮಗೆ ಬೈಯುತ್ತಿದ್ದಾನೆ ಎಂದು ತಪ್ಪಾಗಿ ಅರ್ಥೈಸಿದ ಪಕ್ಕದ ಮನೆಯ ಜೇಮ್ಸ್ ಆಸಿಡ್ ಎರಚಿದ್ದಾನೆ ಎಂದು ತಿಳಿದು ಬಂದಿದೆ.
ಸದ್ಯ ಗಾಯಾಳು ಸುಂದರ್ ರಾಜ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸಿಡ್ ದಾಳಿಯಿಂದಾಗಿ ಸುಂದರ್ ರಾಜ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಎಡಗಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚಿಸಿದ್ದಾರೆ.
ನಾಯಿ ಹೆಸರಿನಲ್ಲಿ ತನಗೆ ಬಯ್ಯುತ್ತಿರುವುದಾಗಿ ಜೇಮ್ಸ್ ಆರೋಪಿಸಿದ್ದು, ಈತನ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.