ಅಂತರ್ ವಿವಿ ಚಾಂಪಿಯನ್ ಶಿಪ್ ಪ್ರಶಸ್ತಿ ಗಳಿಸಿದ ಮಂಗಳೂರು ವಿವಿ ಕಬಡ್ಡಿ ತಂಡಕ್ಕೆ ವಿಧಾನಸಭೆಯಲ್ಲಿ ಅಭಿನಂದನೆ

Update: 2023-12-15 11:22 GMT

ಬೆಳಗಾವಿ: ಅಂತರ್ ವಿಶ್ವವಿದ್ಯಾಲಯ ಪುರುಷರ ಕಬ್ಬಡ್ಡಿ ಚಾಂಪಿಯನ್ ಶಿಪ್‍ನ ಪ್ರಶಸ್ತಿ ಪುರಷೃತ ಮಂಗಳೂರು ವಿಶ್ವ ವಿದ್ಯಾಲಯದ ತಂಡವನ್ನು ವಿಧಾನಸಭೆಯಲ್ಲಿ ಪಕ್ಷಬೇಧ ಮರೆತು ಮುಕ್ತ ಕಂಠದಿಂದ ಅಭಿನಂದನೆ ಸಲ್ಲಿಸಲಾಯಿತು.

ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯ ಬಳಿಕ ಸ್ಪೀಕರ್ ಯು.ಟಿ.ಖಾದರ್, ‘ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಲಯ ಪುರುಷರ ಕಬ್ಬಡ್ಡಿ ಚಾಂಪಿಯನ್ ಶಿಪ್‍ನ ಪ್ರಶಸ್ತಿ ಗಳಿಸಿದ ಮಂಗಳೂರು ವಿಶ್ವ ವಿದ್ಯಾಲಯ ತಂಡವು ವಿಧಾನಸಭೆಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಹಾಜರಾಗಿದೆ. ಈ ತಂಡವು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದು, ಈ ತಂಡದ ಎಲ್ಲ ಸದಸ್ಯರನ್ನು ಅಭಿನಂದಿಸುತ್ತೇನೆ’ ಎಂದು ಪ್ರಕಟಿಸಿದರು.

‘23 ವರ್ಷಗಳ ಬಳಿಕ ಮೊದಲ ಬಾರಿಗೆ ಕರ್ನಾಟಕ ತಂಡ ಕಬ್ಬಡ್ಡಿ ಚಾಂಪಿಯನ್ ಆಗಿದೆ. ಅದು ಮಂಗಳೂರು ವಿಶ್ವವಿದ್ಯಾಲಯಕ್ಕೆ ಕಬಡ್ಡಿ ಚಾಂಪಿಯನ್ ಶಿಪ್ ಪಟ್ಟ ಸಿಕ್ಕಿದೆ. ಮಂಗಳೂರು ವಿವಿ ಕಬಡ್ಡಿ ಆಟಗಾರರು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕಬಡ್ಡಿ ಚಾಂಪಿಯನ್ ಶಿಪ್ ಗೆದ್ದ ಕಬ್ಬಡ್ಡಿ ಆಟಗಾರರು, ಮ್ಯಾನೇಜರ್ ಇಂದು ಸದನದ ಕಲಾಪ ವೀಕ್ಷಣೆಗೆ ಆಗಮಿಸಿದ್ದು, ಸದನದ ಎಲ್ಲ ಸದಸ್ಯರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೀರ್ತಿ ತರಲಿ ಎಂದು ಹಾರೈಸಿದ ಸ್ಪೀಕರ್ ಖಾದರ್ ಅಭಿನಂದನೆ ಸಲ್ಲಿಸಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಇನ್ನಿತರ ಸದಸ್ಯರು ಮಾತನಾಡಿ, ಅಂತರ್ ವಿವಿ ಪುರುಷರ ಕಬ್ಬಡ್ಡಿ ಚಾಂಪಿಯನ್ ಶಿಪ್‍ನ ಪ್ರಶಸ್ತಿ ಗಳಿಸಿದ ಮಂಗಳೂರು ವಿಶ್ವ ವಿದ್ಯಾಲಯದ ಕಬ್ಬಡ್ಡಿ ತಂಡವನ್ನು ಮುಕ್ತಕಂಠದಿಂದ ಅಭಿನಂದಿಸಿದರು.

‘ಅಖಿಲ ಭಾರತ ಅಂತರ ವಿವಿ ಕ್ರೀಡಾಕೂಟದಲ್ಲಿ ಚಾಪಿಯನ್ ಶಿಪ್ ವಿಜೇತ ಮಂಗಳೂರು ವಿವಿ ಕಬ್ಬಡ್ಡಿ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾಗೇಂದ್ರ, ಸ್ಪೀಕರ್ ಯು.ಟಿ.ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಭಿನಂದಿಸಿ, 1ಲಕ್ಷ ರೂ. ಪ್ರೋತ್ಸಾಹ ಧನದ ಚೆಕ್ ಅನ್ನು ತಂಡಕ್ಕೆ ವಿತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News