‘ಬಿಎಸ್‍ವೈ ವಿಚಾರದಲ್ಲಿ ತುಟಿ ಬಿಚ್ಚುವ ಎದೆಗಾರಿಕೆ ಇಲ್ಲವೇ?’ : ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ

Update: 2025-01-09 15:44 GMT

ಪ್ರಧಾನಿ ಮೋದಿ(PTI)

ಬೆಂಗಳೂರು : ‘ಮಾಜಿ ಸಿಎಂ ಬಿಎಸ್‍ವೈ ಮೇಲಿನ ‘ಪೋಕ್ಸೋ' ಪ್ರಕರಣದ ಸಂತ್ರಸ್ತೆ ಹಾಗೂ ಅವರ ಕುಟುಂಬ ಸದಸ್ಯರು ಮಾನಸಿಕವಾಗಿ ಜರ್ಜರಿತರಾಗಿದ್ದು, ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಆರೋಪಿ ಮಾಜಿ ಸಿಎಂ ತಮ್ಮ ಪ್ರಭಾವ ಬಳಸಿ ಆರೋಪದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಂತ್ರಸ್ತೆಗೆ ಆದಷ್ಟು ಬೇಗ ನ್ಯಾಯ ಸಿಗಲಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಗುರುವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಮಾಜಿ ಸಿಎಂ ಬಿಎಸ್‍ವೈ ಗಂಭೀರವಾದ ‘ಪೋಕ್ಸೋ' ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಬಿಜೆಪಿ ಉನ್ನತ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಯಡಿಯೂರಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸುವ ದಮ್ಮು, ತಾಕತ್ತಿಲ್ಲವೇ?’ ಎಂದು ಪ್ರಶ್ನಿಸಿದೆ.

‘ಬೇಟಿ ಬಚಾವೋ ಎಂದು ಬೊಂಬಡಾ ಹೊಡೆದ ಪ್ರಧಾನಿ ಮೋದಿ ಅವರಿಗೆ ಪೋಕ್ಸೋ ಆರೋಪಿ ಮಾಜಿ ಸಿಎಂ ಬಿಎಸ್‍ವೈ ವಿಚಾರದಲ್ಲಿ ತುಟಿ ಬಿಚ್ಚುವ ಎದೆಗಾರಿಕೆ ಇಲ್ಲವೇ?’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News