ಕಸ ವಿಲೇವಾರಿ ಘಟಕಕ್ಕೆ ನಾಲ್ಕು ಪ್ರವೇಶ ಮತ್ತು ನಿರ್ಗಮನ ದ್ವಾರದ ವ್ಯವಸ್ಥೆಗೆ ಡಿಸಿಎಂ ಸೂಚನೆ

Update: 2023-08-12 18:25 GMT

ಬೆಂಗಳೂರು, ಆ.12: ಬೆಲ್ಲಹಳ್ಳಿ ಹಾಗೂ ಮಿಟಗಾನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಾಲ್ಕು ಪ್ರವೇಶ ಮತ್ತು ನಿರ್ಗಮನ ದ್ವಾರದ ವ್ಯವಸ್ಥೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಬಿಎಂಪಿ ಅಧಿಕಾರಿಗಳಿಗೆ ಆದೇಶ ನೀಡಿದರು.

ಶನಿವಾರ ಮಧ್ಯಾಹ್ನ ಬೆಲ್ಲಹಳ್ಳಿ ಮತ್ತು ಮಿಟಗಾನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಅವರು, ಕಸದ ಲಾರಿಗಳು ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿರುವುದು ಹಾಗೂ ಸುಮಾರು 55 ಎಕರೆ ವಿಸ್ತೀರ್ಣದ ಈ ಘಟಕಕ್ಕೆ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ಕೇಂದ್ರ ಇರುವುದನ್ನು ಗಮನಿಸಿದರು.

ಈ ರೀತಿ ಲಾರಿಗಳು ಸಾಲುಗಟ್ಟಿ ನಿಲ್ಲುವುದು ಸರಿ ಅಲ್ಲ. ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥ. ಹೀಗಾಗಿ ತಕ್ಷಣವೇ ನಾಲ್ಕು ದ್ವಾರಗಳನ್ನು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ ಅವರು, ಜತೆಗೆ ಈಗ ಲಾರಿಗಳು ಆರೇಳು ತಾಸು ಕಾಯುತ್ತಿರುವುದು ಸರಿ ಅಲ್ಲ. ಬಂದ ಎರಡು ಗಂಟೆ ಒಳಗೆ ಕಸ ವಿಲೇವಾರಿ ಮಾಡಿ ನಿರ್ಗಮಿಸುವ ವ್ಯವಸ್ಥೆ ಖಾತರಿ ಮಾಡಿ ಎಂದು ಸೂಚಿಸಿದರು.

ಪ್ರವೇಶ ಕೇಂದ್ರದಲ್ಲಿ ಲಾರಿಗಳ ಆಗಮನ, ಕಸ ವಿಲೇವಾರಿ ಬಗ್ಗೆ ಶಿವಕುಮಾರ್ ಮಾಹಿತಿ ಪಡೆದುಕೊಂಡರು. ಈ ವೇಳೆ ಹಿರಿಯ ಐಎಎಸ್ ಅಧಿಕಾರಿಗಳಾದ ರಾಕೇಶ್ ಸಿಂಗ್, ತುμÁರ್ ಗಿರಿನಾಥ್, ರಾಜೇಂದ್ರ ಚೋಳನ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ.ರಾಜೇಂದ್ರ ಪ್ರಸಾದ್ ಜತೆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News