ಸಚಿವ ಸಂಪುಟ ಉಪಸಮಿತಿ ಸಭೆಯ ನಂತರ ರಾಜ್ಯದಲ್ಲಿ ಬರ ಘೋಷಣೆ ಬಗ್ಗೆ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2023-08-28 10:11 GMT

ಮೈಸೂರು, ಆ.  28: ರಾಜ್ಯದಲ್ಲಿ ಬರದ ಛಾಯೆಯಿರುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯ ಸಭೆ ಇಂದು ಅಥವಾ ನಾಳೆ ನಡೆಯಲಿದ್ದು, ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಿ, ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮೈಸೂರಿನ ಸರ್ಕಾರಿ ಭವನದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. 

ಮೋಡ ಬಿತ್ತನೆ ಇಂದಿನವರೆಗೂ ಎಲ್ಲಿಯೂ ಯಶಸ್ವಿಯಾಗಿಲ್ಲ. ಬರಗಾಲ ಘೋಷಣೆಯಾದ ಮೇಲೆ ಕೇಂದ್ರ ಸರ್ಕಾರದವರಿಗೆ ತಿಳಿಸಲಾಗುವುದು. ಕೇಂದ್ರ ಸರ್ಕಾರದವರು ಪರಿಶೀಲಿಸಿದ ನಂತರ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳ ಪ್ರಕಾರ ನೆರವು ನೀಡುತ್ತಾರೆ ಎಂದರು. ಬರಗಾಲ ಎಂದು ಘೋಷಣೆಯಾದ ನಂತರ ಆ ತಾಲ್ಲೂಕುಗಳಲ್ಲಿ ಬರ ಪರಿಹಾರವಾಗಿ ಜನರಿಗೆ ಕೆಲಸ, ಮುಂತಾದ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದರು.

ಮೂರು ದಿನಗಳ ಪ್ರವಾಸ

ಮೂರು ದಿನಗಳ ಕಾಲ ಮೈಸೂರು ಪ್ರವಾಸ ಕೈಗೊಂಡಿದ್ದು, ಇಂದು ಕೆಡಿಪಿ ಸಭೆ ನಡೆಸಿದ್ದೇನೆ. ನಾಳೆ ಸುತ್ತೂರು ಮಠ ಹಾಗೂ ಸಿದ್ದಲಿಂಗಪುರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ʼʼಒಂದು ಲಕ್ಷ ಕ್ಕೂ ಹೆಚ್ವು ಜನ ಸೇರುವ ನಿರೀಕ್ಷೆʼʼ

ಕೆ.ಆರ್.ಆಸ್ಪತ್ರೆಯಲ್ಲಿ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡುವ ಬರ್ನ್ಸ್ ವಾರ್ಡ್ ಉದ್ಘಾಟನೆ ಇದೆ. ಆಗಸ್ಟ್ 30 ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು. ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ 3 ಗ್ಯಾರಂಟಿ ಗಳನ್ನು ಕಾರಿ ಮಾಡಿದ್ದು, ನಾಲ್ಕನೇ ಗ್ಯಾರಂಟಿ ಯನ್ನು ಜಾರಿ ಮಾಡಲಿದ್ದೇವೆ ಎಂದರು. ಒಂದು ಲಕ್ಷ ಕ್ಕೂ ಹೆಚ್ವು ಜನ ಸೇರುವ ನಿರೀಕ್ಷೆ ಇದ್ದು, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಆಗಮಿಸಲಿದ್ದಾರೆ. ಖರ್ಗೆಯವರು ಉದ್ಘಾಟಿಸಿ, ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ನಾಲ್ಕು ಜಿಲ್ಲೆಗಳು ಸೇರಿ ಕಾರ್ಯಕ್ರಮ ಆಯೋಜಿಸಿದೆ. ಎಲ್ಲಾ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವುದಾಗಿ ಮುಖ್ಯ ಮಂತ್ರಿಗಳು ತಿಳಿಸಿದರು.

ʼʼಗೃಹಲಕ್ಷ್ಮಿ ದೇಶದಲ್ಲಿಯೇ ದೊಡ್ಡ ಕಾರ್ಯಕ್ರಮʼʼ

ದೇಶದಲ್ಲಿಯೇ ಇದು ದೊಡ್ಡ ಕಾರ್ಯಕ್ರಮ. ವರ್ಷದಲ್ಲಿ ಸುಮಾರು 32,ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಈ ವರ್ಷ ಸುಮಾರು 18 ಸಾವಿರ ಕೋಟಿ ರೂ. ಗಳು ವೆಚ್ಚವಾಗಲಿದೆ. 1.33 ಕೋಟಿ ಲಕ್ಷ ಕುಟುಂಬಗಳ ಯಜಮಾನಿಗೆ 2000 ರೂ. ನೀಡಲಾಗುತ್ತಿದೆ.ಒಂದು ತಿಂಗಳಿಗೆ 4-5 ಸಾವಿರ ರೂ.ಗಳು ಒಂದು ಕುಟುಂಬ ಕ್ಕೆ ದೊರೆಯಲಿದೆ. ಇದರಿಂದ ಅವರ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಅವರ ಕೈಯಲ್ಲಿ ದುಡ್ಡು ಇರುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಎಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಿರುತ್ತದೆಯೋ ಅಲ್ಲಿ ಜಿಡಿಪಿ ಕೂಡ ಬೆಳವಣಿಗೆ ಆಗುತ್ತದೆ ವರ್ಷಕ್ಕೆ ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದರು.

ಬೆಳಗಾವಿಯಿಂದ ಕಾರ್ಯಕ್ರಮ ಮೈಸೂರಿಗೆ ಸ್ಥಳಾಂತರ ವಾಗಿರುವ ಪ್ರತಿಕ್ರಿಯೆ ನೀಡಿ ಎಲ್ಲಾ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಜಾರಿಯಾಗಲಿದೆ. ಬೆಳಗಾವಿಗೆ ಬದಲಾಗಿ ಮೈಸೂರಿನಲ್ಲಿ ಏರ್ಪಾಡಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News