ಬೆಳಗಾವಿ ಮಾಹಿತಿ ಆಯೋಗದ ಪೀಠಕ್ಕೆ ತಕ್ಷಣ ಆಯುಕ್ತರ ನೇಮಕಕ್ಕೆ ಆಗ್ರಹ
Update: 2023-11-08 16:18 GMT
ಬೆಂಗಳೂರು: 'ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಖಾಲಿ ಇರುವ ಮಾಹಿತಿ ಆಯುಕ್ತರ ಹುದ್ದೆಗೆ ಆಯುಕ್ತರನ್ನು ತಕ್ಷಣ ಭರ್ತಿ ಮಾಡಬೇಕು ಮತ್ತು ಸ್ಥಗಿತಗೊಂಡಿರುವ ಪೀಠದ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕು' ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ 'ನೈಜ ಹೋರಾಟಗಾರರ ವೇದಿಕೆ'ಯ ಹೆಚ್ ಎಂ. ವೆಂಕಟೇಶ್, ಹಂದ್ರಾಳ್ ನಾಗಭೂಷಣ್, ಲೋಕೇಶ್ ಬಿ ಎಸ್, ಜಗದೀಶ್ ಟಿ ಹಾಗೂ ಕುಣಿಗಲ್ ನರಸಿಂಹಮೂರ್ತಿ, ''ಮುಂದಿನ ವಿಧಾನಸಭಾ ಚಳಿಗಾಲದ ಅಧಿವೇಶನವು ಬೆಳಗಾವಿಯಲ್ಲಿ ನಡೆಯುತ್ತಿದ್ದು, ಅಧಿವೇಶನ ನಡೆಯುವುದಷ್ಟರೊಳಗೆನೇ ತಾವು ಬೆಳಗಾವಿ ಮಾಹಿತಿ ಆಯೋಗದ ಪೀಠಕ್ಕೆ ಚಾಲನೆ ನೀಡಬೇಕು'' ಎಂದು ಆಗ್ರಹಿಸಿದ್ದಾರೆ.