ಧಾರವಾಡ | ಅಂಡರ್‌ʼಪಾಸ್‌ನಲ್ಲಿ ಸಿಲುಕಿದ ಎಲ್‌ಪಿಜಿ ಟ್ಯಾಂಕರ್‌ ನಿಂದ ಅನಿಲ ಸೋರಿಕೆ; ವಿದ್ಯುತ್ ಕಡಿತ, ಜನರ ಓಡಾಟಕ್ಕೂ ನಿರ್ಬಂಧ

Update: 2023-08-16 19:12 GMT

ಧಾರವಾಡ: ಎಲ್​ಪಿಜಿ ಟ್ಯಾಂಕರ್​ನಿಂದ ಅನಿಲ ಸೋರಿಕೆ ಆಗುತ್ತಿರುವುದರ ಹಿನ್ನೆಲೆಯಲ್ಲಿ ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ಉಂಟಾಗಿದ್ದು, ವಿದ್ಯುತ್ ಸಂಪೂರ್ಣ ಕಡಿತಗೊಳಿಸಿದ್ದಲ್ಲದೆ ಜನರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ.

ಧಾರವಾಡ ಹೈಕೋರ್ಟ್​ ಬಳಿ ಅಂಡರ್​ಪಾಸ್​ನಲ್ಲಿ ಸಿಲುಕಿದ ಹೆಚ್​ಪಿ ಕಂಪೆನಿಗೆ ಸೇರಿದ ಟ್ಯಾಂಕರ್​ನಿಂದ ಗ್ಯಾಸ್ ಸೋರಿಕೆ ಆಗಿದೆ. ಸುರಕ್ಷತಾ ದೃಷ್ಟಿಯಿಂದ ಈ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸುರಕ್ಷತಾ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿಯಿಂದ ಧಾರವಾಡ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ವಾಹನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ ಎಂದು ಬೆಳಗಾವಿ ಪೊಲೀಸ್​ ವರಿಷ್ಠಾಧಿಕಾರಿ (SP) ಡಾ.ಸಂಜೀವ್​​ ಪಾಟೀಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News