ಡಿ.ಕೆ.ಶಿವಕುಮಾರ್ ನನ್ನ ಸಿಡಿ ನಿಮ್ಮ ಬಳಿ ಇದ್ದರೆ ರಿಲೀಸ್ ಮಾಡಿ : ನಿಶಾ ಯೋಗೇಶ್ವರ್

Update: 2024-10-26 15:28 GMT

ನಿಶಾ ಯೋಗೇಶ್ವರ್

ಬೆಂಗಳೂರು: ಡಿ.ಕೆ. ಶಿವಕುಮಾರ್ ನನ್ನ ಸಿಡಿ ಇಟ್ಟುಕೊಂಡು ನನ್ನ ತಂದೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಡಿ.ಕೆ.ಶಿವಕುಮಾರ್ ಬಳಿ ನನ್ನ ಸಿಡಿ ಇದ್ದರೆ ಬಿಡುಗಡೆ ಮಾಡಬೇಕು ಎಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಹೇಳಿದ್ದಾರೆ.

ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಅವರು, ಖಾಸಗಿ ಯೂಟ್ಯೂಬ್ ಚಾನಲ್‍ವೊಂದು ನನ್ನ ಕುರಿತಾದ ಸಿಡಿ ವಿಚಾರವನ್ನು ಪ್ರಸ್ತಾಪಿಸಿದೆ. ಪುತ್ರಿಯ ಮಾನ ರಕ್ಷಣೆಗೆ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ ಎಂದು ಆರೋಪಿಸಿದೆ. ಹೀಗಾಗಿ ಡಿ.ಕೆ. ಶಿವಕುಮಾರ್ ಸರ್, ನೀವು ಯಾವುದಕ್ಕೂ ಹೆದರುವುದು ಬೇಡ. ನಿಮ್ಮ ಬಳಿ ಸಿಡಿ ಇದ್ದರೆ ಹಿಂಜರಿಯದೇ ಸಿಡಿ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಅಗ್ನಿ ಪರೀಕ್ಷೆ ನಡೆಯುತ್ತಿದೆ. ಆ ಸಿಡಿ ಇಲ್ಲ ಎನ್ನುವುದಾದರೆ ಅದನ್ನು ಜನರಿಗೆ ಬಂದು ತಿಳಿಸಿ. ಇಂತಹ ದೊಡ್ಡ ಆರೋಪ ನಿಮ್ಮ ಮೇಲಿದೆ. ನೀವು ದೊಡ್ಡವರು, ನಿಮ್ಮಲ್ಲಿ ಸಿಡಿ ವಿಷಯ ಮಾಮೂಲಿ, ಆದರೆ ನೀವು ಹೆಣ್ಣು ಮಕ್ಕಳನ್ನು ಇಂತಹ ವಿಷಯನ್ನು ಎಳೆಯುತ್ತಿದೀರಾ ಎಂದು ಡಿ.ಕೆ. ಶಿವಕುಮಾರ್‌ ರನ್ನು ಅವರು ಪ್ರಶ್ನಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಸರ್, ನೀವು ಒಬ್ಬರು ತಂದೆ. ನಿಮಗೂ ಹೆಣ್ಣು ಮಕ್ಕಳಿದ್ದಾರೆ. ನಮ್ಮ ಪೀಳಿಗೆಗೆ ಸ್ಪಷ್ಟತೆ ಬೇಕು. ಆ ಸ್ಪಷ್ಟತೆಯನ್ನು ನೀವೇ ಕೊಡಿ. ನನ್ನ ಸಿಡಿ ನಿಜವಾಗಿಯೂ ನಿಮ್ಮ ಬಳಿ ಇದ್ದರೆ, ಯಾವುದೇ ಯೋಚನೆ ಮಾಡದೇ ಬಿಡುಗಡೆ ಮಾಡಿ. ನಿಮ್ಮ ಉತ್ತರಕ್ಕೆ ನಾನು ಕಾಯುತ್ತಿರುತ್ತೇನೆ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News