ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಹೆಸರು ಸೇರಿಸಿದ ಎಸ್ಐಟಿ
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಮತ್ತು ಇತರ ಮೂವರ ವಿರುದ್ಧದ ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಕರ್ನಾಟಕ ಸಿಐಡಿಯ ವಿಶೇಷ ತನಿಖಾ ತಂಡ, ಚುನಾಯಿತ ಪ್ರತಿನಿಧಿಗಳಿಗಾಗಿ ಇರುವ ವಿಶೇಷ ನ್ಯಾಯಾಲಯದ ಮುಂದೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಮುನಿರತ್ನ 2020ರಿಂದ ಎರಡು ವರ್ಷ ಕಾಲ 40 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 2481 ಪುಟಗಳ ಆರೋಪಪಟ್ಟಿಯಲ್ಲಿ ಆಪಾದಿಸಲಾಗಿದೆ. ಅಂತೆಯೇ ಆರ್.ಸುಧಾಕರ್ ಮತ್ತು ಆರ್.ಶ್ರೀನಿವಾಸ್ ಹಾಗೂ ಅಮಾನತುಗೊಂಡಿರುವ ಇನ್ಸ್ಪೆಕ್ಟರ್ ಬಿ.ಅಯ್ಯಣ್ಣ ರೆಡ್ಡಿ ಅವರ ವಿರುದ್ಧ ಸಾಕ್ಷ್ಯ ನಾಶಪಡಿಸಿದ ಅರೋಪ ಹೊರಿಸಲಾಗಿದೆ. ಶಾಸಕರ ವಿರೋಧಿಗಳನ್ನು ಎಚ್ಐವಿ ಸೋಂಕಿತ ಮಹಿಳೆಯನ್ನೊಳಗೊಂಡ ಹನಿಟ್ರ್ಯಾಪ್ ನಲ್ಲಿ ಸಿಲುಕಿಸಲು ಗುರಿ ಮಾಡಲಾಗಿದೆ ಮತ್ತು ಅಪರಾಧ ಪಿತೂರಿ ಹೆಣೆಯಲಾಗಿದೆ ಎಂದು ದೂರಿದೆ.
ಆರೋಪ ಪಟ್ಟಿಯಲ್ಲಿ 146 ಮಂದಿ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಿದ್ದು, 850 ಸಾಕ್ಷ್ಯಕ್ಕೆ ಸಂಬಂಧಿಸಿದ ಪುರಾವೆಗಳನ್ನು ನೀಡಲಾಗಿದೆ. ಮುನಿರತ್ನ ವಿರುದ್ಧ ದೌರ್ಜನ್ಯ, ಲಂಚ ಮತ್ತು ವಂಚನೆ ಪ್ರಕರಣದ ಬಗ್ಗೆ ಕೂಡಾ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಆರೋಪಪಟ್ಟಿಯನ್ನು ಇನ್ನಷ್ಟೇ ಸಲ್ಲಿಸಬೇಕಿದೆ.