ಕೇಂದ್ರ ಸರಕಾರದಿಂದ ನಾಡಿನ ಆರ್ಥಿಕ ಪ್ರಗತಿ ಕುಗ್ಗಿಸುವ ಯತ್ನ : ಡಿ.ಕೆ.ಸುರೇಶ್

Update: 2024-07-29 13:32 GMT

ಬೆಂಗಳೂರು,: ಕರ್ನಾಟಕದ ಆರ್ಥಿಕ ಪ್ರಗತಿ ಕುಗ್ಗಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಹಿಂಬಾಗಿಲ ಮೂಲಕ ಮಾಡುತ್ತಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಟೀಕಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿ ಗೆ ಮಾತನಾಡಿದ ಅವರು, ಕೇಂದ್ರ ಬಜೆಟ್‍ನಲ್ಲಿ ಗುಜರಾತ್, ಉತ್ತರಪ್ರದೇಶ ಸೇರಿ ಉತ್ತರಭಾರತದ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದಕ್ಷಿಣ ಭಾರತದ ರಾಜ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕೇಂದ್ರ ಸರಕಾರದ ಈ ತಾರತಮ್ಯವನ್ನು ವಿರೋಧಿಸಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಭಜನೆಯ ಅಭಿಪ್ರಾಯಗಳು ಮಡುಗಟ್ಟಿವೆ. ತಮಿಳುನಾಡಿನಲ್ಲಿ ಹಲವು ಬಾರಿ ಈ ಕುರಿತು ಚರ್ಚೆಯಾಗಿದೆ ಎಂದು ಹೇಳಿದರು.

ಕೇಂದ್ರದಿಂದ ರಾಜ್ಯಕ್ಕೆ ದೊರೆಯಬೇಕಾದ ಆರ್ಥಿಕ ನೆರವು ಯಾರ ಭಿಕ್ಷೆಯೂ ಅಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಕಡಿಮೆ ಅನುದಾನ ಇತ್ತು ಎಂಬುದು ಹಾಸ್ಯಾಸ್ಪದ. ಆಗಿನ ಬಜೆಟ್ ಗಾತ್ರ ಮತ್ತು ಈಗಿನ ಬಜೆಟ್ ಗಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಡದಲ್ಲಿ ಕೆಲಸ ಮಾಡುವುದು ಸರಿಯಲ್ಲ. ಮೊದಲು ಆರೋಗ್ಯದ ಕಡೆ ಗಮನ ಕೊಡಲಿ. ರಾಜ್ಯ ಮತ್ತು ದೇಶಕ್ಕೆ ಅವರ ಸೇವೆ ಅಗತ್ಯವಿದೆ. ಯಾರಿಗೇ ಆಗಲಿ ಕೆಟ್ಟದಾಗಬೇಕೆಂದು ಬಯಸುವುದಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News