ಇಂದಿರಾ ಕ್ಯಾಂಟೀನ್ ಹೊಸ ಮೆನುವಿನಲ್ಲಿ ಮಂಗಳೂರು ಬನ್ಸ್ ಸೇರಿ ಏನೆಲ್ಲಾ ಇದೆ ಗೊತ್ತಾ?
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಜನಪ್ರಿಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಲ್ಲಿ ಜ.16 ರಿಂದ ಹೊಸ ಆಹಾರ ಮೆನುವಿನ ಪ್ರಕಾರ ಆಹಾರ ವಿತರಣೆಯಾಗಲಿದೆ
ಈ ಸಂಬಂಧ ʼಎಕ್ಸ್ʼ ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ʼಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಇಂದಿರಾ ಕ್ಯಾಂಟೀನ್‌ನಲ್ಲಿ ಹೊಸ ಮೆನು ಸೇರ್ಪಡೆಯಾಗಿದೆ. ಶುಚಿ-ರುಚಿಯಾದ ಆಹಾರಗಳು ಎಂದಿನಂತೆ ನಿಮ್ಮ ಇಂದಿರಾ ಕ್ಯಾಂಟೀನ್‌ನಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಹೊಸ ಆಹಾರದ ಮೆನು ಈ ಕೆಳಗಿನಂತಿವೆ
ಉಪಹಾರ ( ಬೆಳಿಗ್ಗೆ 7 ರಿಂದ 10 ಗಂಟೆ ವರೆಗೆ) ಪ್ಲೇಟ್ ಗೆ ರೂ.5
► ಇಡ್ಲಿ ಸಾಂಬಾರ್
► ಇಡ್ಲಿ ಚಟ್ನಿ
► ವೆಜ್ ಪುಲಾವ್ ರಾಯಿತಾ
► ಬಿಸಿಬೇಳೆ ಬಾತ್ ಬೂಂದಿ
► ಖಾರಾಬಾತ್ ಚಟ್ನಿ
► ಪೊಂಗಲ್ ಚಟ್ನಿ
► ಕೇಸರಿಬಾತ್
► ಬ್ರೆಡ್ ಜಾಮ್
► ಮಂಗಳೂರು ಬನ್ಸ್
ಮಧ್ಯಾಹ್ನ ಊಟ ( 1 ರಿಂದ 3 ಗಂಟೆ ವರೆಗೆ ) ಪ್ಲೇಟ್‌ಗೆ ರೂ. 10
► ಅನ್ನ, ತರಕಾರಿ ಸಾಂಬಾರು, ಖೀರು
► ಅನ್ನ , ತರಕಾರಿ ಸಾಂಬಾರು, ರಾಯಿತಾ
► ಅನ್ನ, ತರಕಾರಿ ಸಾಂಬಾರು, ಮೊಸರನ್ನ
► ರಾಗಿ ಮುದ್ದೆ, ಸೊಪ್ಪಿನ ಸಾರು, ಖೀರು
► ಚಪಾತಿ, ಸಾಗು, ಖೀರು
ರಾತ್ರಿ ಊಟ (ಸಂಜೆ 7.30ರಿಂದ ರಾತ್ರಿ 9 ಗಂಟೆವರೆಗೆ ) ಪ್ಲೇಟ್‌ಗೆ ರೂ. 10
► ಅನ್ನ, ತರಕಾರಿ ಸಾಂಬಾರು
► ಅನ್ನ , ತರಕಾರಿ ಸಾಂಬಾರು, ರಾಯಿತಾ
► ರಾಗಿ ಮುದ್ದೆ, ಸೊಪ್ಪಿನ ಸಾರು
► ಚಪಾತಿ , ವೆಜ್ ಗ್ರೇವಿ
ವಿಶೇಷ : ಮಾವಿನಕಾಯಿ ಸೀಸನ್‌ನಲ್ಲಿ ಮಾವಿನಕಾಯಿ ಚಿತ್ರಾನ್ನ ದೊರೆಯಲಿದೆ ಎಂದು ತಿಳಿಸಿದ್ದಾರೆ.