ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ದುರದೃಷ್ಟಕರ : ಡಿ.ವಿ.ಸದಾನಂದ ಗೌಡ ಬೇಸರ

Update: 2024-11-28 10:12 GMT

ಡಿ.ವಿ.ಸದಾನಂದ ಗೌಡ

ಬೆಂಗಳೂರು : "ಪಕ್ಷದ ರಾಜ್ಯಾಧ್ಯನಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ತನಗೆ ಅವಕಾಶ ನೀಡಿದ ಬಿಜೆಪಿ ಪಕ್ಷಕ್ಕೆ ಇವತ್ತು ಒದಗಿಬಂದಿರುವ ಸ್ಥಿತಿ ಒಂದು ದುರಂತ ಮತ್ತು ನೋವಿನ ಸಂಗತಿ" ಎಂದು ರಾಜ್ಯದ ಬಿಜೆಪಿಯ‌ ಬಣ ಸಂಘರ್ಷಕ್ಕೆ ಬಿಜೆಪಿ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರ ಒಂದು ತಂಡ ನಡೆಸುತ್ತಿರುವ ಹೋರಾಟಕ್ಕಿಂತ ಪಕ್ಷದ ನಾಯಕರ ನಡುವಿನ ಭಿನ್ನಮತವೇ ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ಹೈಕಮಾಂಡ್ ಗೆ ಎರಡು ಬಾರಿ ಪತ್ರ ಬರೆದರೂ ಅವರು ಯಾವುದೇ ಕ್ರಮ ಜರುಗಿಲ್ಲ" ಎಂದು ಹೇಳಿದರು.

"ಈಗ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ದುರದೃಷ್ಟಕರ. ನಾನು ಅಧ್ಯಕ್ಷನಾಗಿದ್ಸಾಗ ಇದಕ್ಕಿಂತಲೂ ಪ್ರಬಲ ಗುಂಪುಗಳು ಇದ್ದವು.  ಆದರೆ ಅವು ಯಾವ ಗುಂಪುಗಳು ಬೀದಿಗೆ ಇಳಿದಿರಲಿಲ್ಲ. ಆದರೆ ಪಕ್ಷದಲ್ಲೇ ಪ್ರಥಮವಾಗಿ ಬೀದಿಗೆ ಬಂದಿರೋದು ಅತ್ಯಂತ ನೋವಿನ ಸಂಗತಿ. ಕೆಲವರು ಈ ರೀತಿಯ ಆದರೆ ಒಳ್ಳೆಯದೇ ನಮಗೆ ಅನುಕೂಲ ಆಗಬಹುದು ಎಂದು ಬಿಜೆಪಿಯಲ್ಲಿ ಕೆಲವರು ಇದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News