ಬಿಜೆಪಿಯವರು ಹೇಳಿದಂತೆ ನಾವು ಕುಣಿಯಲು ಆಗುವುದಿಲ್ಲ : ಪ್ರಿಯಾಂಕ್ ಖರ್ಗೆ

Update: 2025-01-04 10:17 GMT

ಬೆಂಗಳೂರು: ಗುತ್ತಿಗೆದಾರ ಸಚಿನ್‌ ಕುಟುಂಬದವರ ಜೊತೆ ಮಾತನಾಡಿದ್ದು, ಅವರ ಕುಟುಂಬದವರಿಗೆ ನಾನೂ ಭರವಸೆ ನೀಡಿದ್ದೇನೆ.ಪಾರದರ್ಶಕವಾಗಿ ತನಿಖೆ ಮಾಡಿಸುವುದು ಸರಕಾರದ ಜವಾಬ್ದಾರಿ .ಬಿಜೆಪಿಯವರು ಹೇಳಿದಂತೆ ನಾವು ಕುಣಿಯಲು ಆಗುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗುತ್ತಿಗೆದಾರ ಸಚಿನ್ ಪ್ರಕರಣದಲ್ಲಿ ಬಿಜೆಪಿಯ ಟೀಕೆ– ಆರೋಪಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, "ಸರಕಾರದ ವಿರುದ್ದ ಹೇಳಿಕೆ ನೀಡುವಂತೆ ಸಚಿನ್ ಕುಟುಂಬದವರಿಗೆ ಬಿಜೆಪಿಯವರು ಒತ್ತಡ ಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಜಕೀಯ ಬೆರೆಸುತ್ತಿರುವುದು ತಪ್ಪು . ಬಿಜೆಪಿಯವರಿಗೆ ಸಿಬಿಐ ಮೇಲೆ ಯಾಕೆ ಪ್ರೀತಿ? ಬಿಜೆಪಿಯವರ ಸ್ಕ್ರಿಪ್ಟ್‌ಗೆ ನಾವು ನಟನೆ ಮಾಡಲು ಆಗುವುದಿಲ್ಲ. ಒಂದು ಜೀವ ಹೋಗಿದೆ, ಅದಕ್ಕೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ʼಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರದ್ದು ಅತಿ ಆಗುತ್ತಿದೆ. ನಮ್ಮ ತಂದೆಯವರಿಗೆ ಗೌರವ ಕೊಟ್ಟು ನಾನೂ ಸುಮ್ಮನೆ ಇದ್ದೇನೆ. ನಮಗೂ ಮಾತನಾಡಲು ಬರುತ್ತದೆ. ನಾವು ಬೀದಿಗೆ ಇಳಿದರೆ ಬಿಜೆಪಿಯವರು ಮನೆ ಸೇರಬೇಕಾಗುತ್ತದೆ’ ಎಂದು ಆಕ್ರೋಶ ಹೊರಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News