ಎಚ್‌ಎಂಪಿವಿ ವೈರಸ್ ಬಗ್ಗೆ ಯಾವುದೇ ಆಂತಕ ಪಡುವ ಅಗತ್ಯವಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Update: 2025-01-06 09:08 GMT

ಬೆಂಗಳೂರು: ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಇದು ಅಸ್ತಿತ್ವದಲ್ಲಿರುವ ವೈರಸ್ ಆಗಿದ್ದು, ಯಾವುದೇ ಆಂತಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಗುವೊಂದರಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿರುವ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಭಾರತದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಆದರೆ, ಇದು ನಿಜವಲ್ಲ. ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಇದೆ. ಈ ವೈರಸ್​ ಕಡಿಮೆ ಇಮ್ಯೂನಿಟಿ ಹೊಂದಿರುವ ಮಕ್ಕಳಿಗೆ ಬರುತ್ತೆ.  ಇಲ್ಲಿ ಕಂಡುಬಂದಿರುವ ವೈರಸ್​ಗೂ, ಚೀನಾ ವೇರಿಯಂಟ್​ಗೂಸಂಬಂಧವಿಲ್ಲ. ಇದರ ಬಗ್ಗೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಪ್ರಸ್ತುತ ವೈರಸ್‌ ಪತ್ತೆಯಾಗಿದೆ ಎನ್ನಲಾದ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಸ್ಯಾಂಪಲ್​ ಅನ್ನು ಪುಣೆ ಲ್ಯಾಬ್​ಗೆ ಕಳುಹಿಸುತ್ತೇವೆ. ಇದರ ಬಗ್ಗೆ ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡುತ್ತೇವೆ. ಎಲ್ಲಾ ಕಡೆ ಟೆಸ್ಟ್​ ಮಾಡಿ ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News